ADVERTISEMENT

ರೈತರಿಗೆ ಸಲಹೆ, ಕಂಪೆನಿಗಳಿಗೆ ಲಾಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಈಚೆಗೆ ವಿಜಾಪುರದ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗುಲ್ಬರ್ಗ ಆಕಾಶವಾಣಿ  ಕೇಳಿದಾಗ ಅನಿಸಿದ್ದು ರೇಡಿಯೋದಲ್ಲಿ ಪ್ರಸಾರವಾಗುವ ರೈತರಿಗೆ ಸಲಹೆಗಳಿಂದ ಹೆಚ್ಚು ಲಾಭ ರೈತರಿಗೋ, ಪರಿಸರಕ್ಕೋ, ರಾಸಾಯನಿಕ ಉತ್ಪಾದನಾ ಕಂಪೆನಿಗಳಿಗೋ?

ಐದು ನಿಮಿಷಗಳ ಸಲಹೆಗಳಲ್ಲಿ ಕನಿಷ್ಠ 20ಕ್ಕೂ ಹೆಚ್ಚು ರಾಸಾಯನಿಕ ಕ್ರಿಮಿನಾಶಕಗಳನ್ನು ಬೆಳೆಗೆ ಸಿಂಪಡಿಸಲು ಸಲಹೆ ಮಾಡಿದ್ದರು. ಒಂದೊಂದು ರೋಗಕ್ಕೂ ನಾಲ್ಕು- ಐದು ಕ್ರಿಮಿನಾಶಕಗಳ ಹೆಸರು ಹೇಳಿದ್ದರು.

ಆಧುನಿಕ ಕೃಷಿಯಲ್ಲಿ ವಿಷಕಾರಿ ರಾಸಾಯನಿಕಕ್ಕೆ ಮುಖ್ಯ ಸ್ಥಾನ. ಇದರ ಸಿಂಪರಣೆಯಿಂದ ಪರಿಸರ ನಾಶ. ಆಹಾರದಲ್ಲಿ ವಿಷದ ಅವಶೇಷ ಉಳಿಕೆ. ಸಿಂಪಡಿಸುವ ರೈತನ ಆರೋಗ್ಯಕ್ಕೂ ಧಕ್ಕೆಯಾಗುತ್ತಿದೆ.
 
ಅಚ್ಚರಿಯ ವಿಷಯವೆಂದರೆ, ಸಾವಯವ ಕೃಷಿಯಲ್ಲಿ ಸಸ್ಯಜನ್ಯ ಕೀಟನಾಶಕಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ನಿಸರ್ಗಕ್ಕೆ ಪೂರಕವಾಗಿ ಕೀಟ ನಿಯಂತ್ರಣ ವಿಧಾನಗಳು ಸಾಕಷ್ಟು ಇವೆ. ಇವೆಲ್ಲ ಇದ್ದರೂ ಆಕಾಶವಾಣಿಯ ರೈತರಿಗೆ ಸಲಹೆ ಕಾರ್ಯಕ್ರಮದಲ್ಲಿ ಬರಿ ರಾಸಾಯನಿಕಗಳ ಹೆಸರು ಶಿಫಾರಸು ಮಾಡುವುದರ ಹಿಂದಿರುವ ಗುಟ್ಟೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.