ADVERTISEMENT

ರೌಡಿಗಳ ಹಾವಳಿ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಮೈಸೂರು ರಸ್ತೆಯ ವಾಲ್ಮೀಕಿ ನಗರದ 2ನೇ ಮುಖ್ಯ ರಸ್ತೆಯ 2ನೇ ಅಡ್ಡ ರಸ್ತೆಯಲ್ಲಿ ಕೆಲವು ರೌಡಿಗಳು ಸೇರಿಕೊಂಡು, ಗಾಂಜಾ, ಸಾಲ್ಸಾಷನ್ ಪೆಯಿಂಟ್‌ನಂಥ ನಶೆ ಬರುವ ವಸ್ತುಗಳನ್ನು ಮೂಗಿಗೆ ಏರಿಸಿಕೊಂಡು ನಶೆ ಬಂದ ಮೇಲೆ ರಸ್ತೆಗಿಳಿದು ಚುಡಾಯಿಸುತ್ತಾರೆ.
ಬೇಕೆಂದೆ ಮೇಲೆ ಬೀಳುತ್ತಾರೆ. ಇಲ್ಲವೇ ಡಿಕ್ಕಿ ಹೊಡೆಯುತ್ತಾರೆ.

ರಾತ್ರಿ ಒಂಟಿ ಮಹಿಳೆಯರ ಮನೆ ಗುರುತಿಸಿ ಬಾಗಿಲು ಬಡಿಯುತ್ತಾರೆ. ಈಗಾಗಲೇ ಇಬ್ಬರು ಮೂವರು ನಾಗರೀಕರನ್ನು ತಡೆದು ತೊಂದರೆ ಕೊಟ್ಟಿರುತ್ತಾರೆ. ಇಂಥವರ ಹಾವಳಿಯನ್ನು ತಪ್ಪಿಸಬೇಕು ಎಂದು ಪೊಲೀಸರಲ್ಲಿ ಮನವಿ.
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.