
ಪ್ರಜಾವಾಣಿ ವಾರ್ತೆಲಂಡನ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡೆಗಳ ಬಗೆಗಿನ ತಾಜಾ ವರದಿಯನ್ನು ಪ್ರಜಾವಾಣಿ ನೀಡುತ್ತಿರುವುದು ಖುಷಿ ತರುತ್ತಿದೆ. ಇದರ ಜೊತೆಗೆ ಕೆ.ಎನ್.ಶಾಂತಕುಮಾರ್‌ರವರ ಚಿತ್ರಗಳು ಅವರಲ್ಲಿರುವ ಕ್ರೀಡಾಭಿರುಚಿಗೆ ಸಾಕ್ಷಿಯಾಗಿದೆ.
ಒಲಿಂಪಿಕ್ಸ್ ಕ್ರೀಡೆಗಳ ಬಗೆಗಿನ ವರದಿ ನಮ್ಮನ್ನೂ ಈ ಕ್ರೀಡೆಗಳಿಗೆ ಬಹಳ ಹತ್ತಿರವಿರುವಂತೆ ಮಾಡಿದೆ ಎಂದರೆ ಅತಿಶಯೋಕ್ತಿಯೇನಲ್ಲ.
ಒಲಿಂಪಿಕ್ಸ್ ಆರಂಭದಿಂದಲೂ ನಾನು `ಪ್ರಜಾವಾಣಿ~ಯನ್ನು ಗಮನಿಸುತ್ತಲೇ ಇದ್ದೇನೆ. ಕ್ರೀಡೆಗೆ ಪ್ರಜಾವಾಣಿ ನೀಡುತ್ತಿರುವ ಪ್ರಾಮುಖ್ಯ ಕಂಡು ಆನಂದವಾಗುತ್ತಿದೆ. ಬೇರೆ ಪತ್ರಿಕೆಗಳಿಗಿಂತ ಪ್ರಾದೇಶಿಕ ಭಾಷೆಯಲ್ಲಿ ಒಲಿಂಪಿಕ್ಸ್ ಬಗೆಗೆ ಸಮಗ್ರ ಮಾಹಿತಿ ನೀಡುತ್ತಿರುವ ನಮ್ಮ ಪ್ರಜಾವಾಣಿಗೆ ಕ್ರೀಡಾಪ್ರೇಮಿಗಳ ಪರವಾಗಿ ಅಭಿನಂದನೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.