ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪ ನ್ಯಾಸಕರ ವರ್ಗಾವಣೆಗೆ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರು ಅರ್ಹರು ಎಂಬ ನಿಯಮ ಜಾರಿಯಲ್ಲಿದೆ.
ಆದರೆ ವರ್ಗಾವಣೆಗೆ ಗರಿಷ್ಠ ಸೇವಾವಧಿ ನಿಗದಿ ಪಡಿಸಿಲ್ಲ. ಇದರಿಂದಾಗಿ ಬಹ ಳಷ್ಟು ಉಪನ್ಯಾಸಕರು ತಾವು ಸೇವೆಗೆ ಸೇರಿದ ಕಾಲೇಜಿನಲ್ಲೇ ನಿವೃತ್ತಿಯಾದ ಉದಾಹರಣೆ ಗಳಿವೆ.
ಒಂದೇ ಕಾಲೇಜಿನಲ್ಲಿ 15-20 ವರ್ಷ ಸೇವೆ ಸಲ್ಲಿಸಿದ ಕೆಲವರು ನಾನು ಸೀನಿಯರ್ ಎಂದು ದಬ್ಬಾಳಿಕೆ ನಡೆಸಿದ ಘಟನೆಗಳಿವೆ. ಇಂಥವರಿಂದಾಗಿ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿದೆ.
ದೀರ್ಘ ಕಾಲ ಒಂದೇ ಕಾಲೇಜಿನಲ್ಲಿರುವ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದೇ ಈ ಸಮಸ್ಯೆಗೆ ಪರಿಹಾರ. ಸರ್ಕಾರ ಇತ್ತ ಗಮನ ಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.