ADVERTISEMENT

ವಸ್ತುನಿಷ್ಠ ವರದಿಗಾರಿಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST

‘ನಾನೇನೂ ಹೇಳುವುದಿಲ್ಲ; ಏನು ಬೇಕಾದರೂ ಬರೆದುಕೊಳ್ಳಿ’ ಎಂದ ಉನ್ನತ ನೌಕರಶಾಹಿಯ ‘ಕೊಬ್ಬಿ’ನ ಮಾತನ್ನು ಯಥಾವತ್ ಪ್ರಕಟಿಸಿರುವ ‘ಪ್ರಜಾವಾಣಿ’ಯ ದಿಟ್ಟತನ ಮೆಚ್ಚುವಂಥದ್ದು.

ವಿಧಾನಮಂಡಲ ಸಚಿವಾಲಯದಲ್ಲಿ ಹುದ್ದೆಗಳನ್ನು ತುಂಬುವಲ್ಲಿ ನಡೆದಿರಬಹುದಾದ ಅವ್ಯವಹಾರದ ಬಗ್ಗೆ ಕೇಳಹೋದಾಗ, ಸಚಿವಾಲಯದ ಕಾರ್ಯದರ್ಶಿ ಹೀಗಂದಿರುವುದು ಅಚ್ಚರಿ ಉಂಟುಮಾಡುವಂಥದ್ದೇನೂ ಅಲ್ಲ. ‘ಏನಾದರೂ ಅವ್ಯವಹಾರ ಮಾಡಿಕೊಳ್ಳುತ್ತೇವೆ; ಕೇಳಲಿಕ್ಕೆ ನೀವ್ಯಾರು?’ ಎಂಬ ಸರ್ಕಾರದ ‘ದೊಡ್ಡ ಜವಾನರ’ ಪಾಳೇಗಾರಿಕೆ, ಜನಸಾಮಾನ್ಯರಿಗೆ ಹೊಸತೇನೂ ಅಲ್ಲ. ‘ಆಫೀಸಿಗೆ ಬನ್ನಿ, ಮಾತಾಡೋಣ’ ಎಂದು ವಿಧಾನಸಭಾಧ್ಯಕ್ಷರೆಂದದ್ದು, ಕರ್ಮಕಾಂಡದ ಹಿಂದಿರಬಹುದಾದ ಅವ್ಯವಹಾರದ ಬಗ್ಗೆ ದೊಡ್ಡ ಸೂಚನೆಯನ್ನೇ ನೀಡುತ್ತದೆ. ‘90 ಹುದ್ದೆಗೆ 160 ನೇಮಕ?’ ತಲೆಬರಹದ ವರದಿ
(ಪ್ರ. ವಾ., ಮಾ.7), ನೇರ ಮತ್ತು ವಸ್ತುನಿಷ್ಠ.

– ಆರ್. ಕೆ. ದಿವಾಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.