ಎಲ್ಲ ವಾಹನಗಳ ತಲೆ ದೀಪ (ಹೆಡ್ಲೈಟ್)ಗಳಿಗೆ ಕಪ್ಪು ಬಣ್ಣದ ಪಟ್ಟಿಯನ್ನು ಲಗತ್ತಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಖಾಸಗಿ ವಾಹನಗಳ ದೀಪಕ್ಕೆ ಈ ಕಪ್ಪು ಬಣ್ಣದ ಪಟ್ಟಿ ಕಾಣುತ್ತಿಲ್ಲ. ಇದರಿಂದಾಗಿ, ರಾತ್ರಿಯಲ್ಲಿ ಎದುರಿಗೆ ಬರುವ ಇತರ ಚಾಲಕರಿಗೆ, ಪ್ರಖರವಾದ ದೀಪಗಳ ಬೆಳಕಿನಿಂದ ಕಣ್ಣು ಕೋರೈಸಿ ವಾಹನ ಚಲಿಸುವುದು ಬಹಳ ಕಷ್ಟವಾಗುತ್ತದೆ ಹಾಗೂ ರಸ್ತೆಯಲ್ಲಿ ಬಹಳ ತಗ್ಗು ದಿಣ್ಣೆಗಳ ಹಾವಳಿಯಂತೂ ಹೇಳ ತೀರದು.
>ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಸಾರಿಗೆ/ಪೊಲೀಸ್ ಇಲಾಖೆ ಮುಖ್ಯಸ್ಥರು ತಕ್ಷಣವೇ ಗಮನವಿಟ್ಟು, ದೀಪಗಳಿಗೆ ಮತ್ತೆ ಕಪ್ಪು ಪಟ್ಟಿಯನ್ನು ಎಲ್ಲಾ ವಾಹನಗಳ ಚಾಲಕರು ಅಳವಡಿಸುವಂತೆ ಆದೇಶಿಸಲು ವಿನಂತಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.