ADVERTISEMENT

ವಿಚಿತ್ರ ಕೊರಗು

ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ ಬೆಂಗಳೂರು
Published 9 ಏಪ್ರಿಲ್ 2015, 19:30 IST
Last Updated 9 ಏಪ್ರಿಲ್ 2015, 19:30 IST

ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಒಕ್ಕಲಿಗರ ಸಂಘ ಆಯೋಜಿಸಿದ್ದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ‘ಒಕ್ಕಲಿಗ ಸಮುದಾಯ ಸ್ವಲ್ಪ ಶೈಕ್ಷಣಿಕವಾಗಿ ಮುಂದುವರಿದರೂ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದಿದೆ. ಬೇರೆ ಸಮುದಾಯಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಮುಂದುವರಿಯುತ್ತಿವೆ.

ನಾನು ಮುಖ್ಯಮಂತ್ರಿಯಾದರೂ ನನ್ನ ಸಮುದಾಯಕ್ಕೆ ಏನೂ ಮಾಡಲಾಗದೇ ಹೋದದ್ದು ದುರದೃಷ್ಟಕರ. ಆ ನೋವಿನಿಂದ ಇಂದಿಗೂ ಕೊರಗುತ್ತಿದ್ದೇನೆ’ (ಪ್ರ.ವಾ., ಏ. 2) ಎಂದಿದ್ದಾರೆ. ಇಡೀ ಕರ್ನಾಟಕದ ಎಲ್ಲ ಜನಸಮುದಾಯವನ್ನೂ ಪ್ರತಿನಿಧಿಸುವ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಕೇವಲ ತಮ್ಮ ಸಮುದಾಯಕ್ಕೆ ಏನೂ ಮಾಡಲಾಗಲಿಲ್ಲ ಎಂದು ಕೊರಗುವುದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸರಿ?


ಮುಖ್ಯಮಂತ್ರಿ ಆದವರೆಲ್ಲ ಅವರವರ ಸಮುದಾಯಗಳಿಗಷ್ಟೇ ಅನುಕೂಲ ಮಾಡುತ್ತಾ ಹೋದರೆ, ಮುಖ್ಯಮಂತ್ರಿ ಆಗುವ ಅವಕಾಶದಿಂದ ವಂಚಿತರಾಗಿರುವ ನೂರಾರು ಜಾತಿ, ಸಮುದಾಯದವರ ಗತಿ ಏನು? ಅಧಿಕಾರ ಸಿಕ್ಕಾಗ ತಮ್ಮ ಜಾತಿಯವರಿಗೆ ಅನುಕೂಲ ಮಾಡಿಕೊಡಬೇಕೆಂಬ ಮನಸ್ಥಿತಿ, ಅದರಲ್ಲೂ ಜಾತ್ಯತೀತ ತತ್ವದ ಮೇಲೆ ರಚನೆಯಾದ ಪಕ್ಷವೆಂದು ಘೋಷಿಸಿಕೊಂಡ ಜೆಡಿಎಸ್‌ ಮುಖಂಡರ ಈ ಮಾತು ಸಂವಿಧಾನವಿರೋಧಿ ನಿಲುವಿನಿಂದ ಕೂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT