ADVERTISEMENT

ವಿದೇಶಿ ಕಳೆಯೇ ಆಪತ್ತು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬಂಡೀಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಹುಲಿಗಳ ಮರಣದ ಬಗ್ಗೆ ತಲೆದೋರಿರುವ ಅನುಮಾನಗಳು ಅಭಯಾರಣ್ಯಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಅಭಯಾರಣ್ಯಗಳು ಇಂದು ವಿದೇಶಿ ಕಳೆಗಳಾದ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂಗಳಿಂದ ತುಂಬಿಹೋಗಿವೆ. ಸಸ್ಯಾಹಾರಿ ಪ್ರಾಣಿಗಳು (ಆನೆಗಳು) ಮೇವು ಹುಡುಕಿಕೊಂಡು ಜಮೀನುಗಳಿಗೆ ಲಗ್ಗೆಯಿಡುತ್ತಿವೆ; ಬೇಟೆ ಪ್ರಾಣಿಗಳೂ ಕೂಡ ಹುಲ್ಲಿನ ಕೊರತೆಯಿಂದ ಕಡಿಮೆಯಾಗುತ್ತಿವೆ.

ಇದೇ `ಮನುಷ್ಯ-ಪ್ರಾಣಿಗಳ ಘರ್ಷಣೆ~. ಇದರ ಉಪಶಮನವೇ ವನ್ಯಜೀವಿ ಸಂರಕ್ಷಣೆ ಎಂಬಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೇಟೆ ಪ್ರಾಣಿಗಳು ಕಡಿಮೆಯಾಗಿವೆ.

ಪ್ರಾಣಿಗಳು ವಿಹರಿಸಲು ಜಾಗವಿಲ್ಲದಾಗಿದೆ. ಇವಕ್ಕೆಲ್ಲ ದಟ್ಟವಾಗಿ ಹಬ್ಬಿರುವ ವಿದೇಶಿ ಕಳೆಗಳೇ ಕಾರಣ. ಇವನ್ನು ಕಿತ್ತು, ಕತ್ತರಿಸಿ, ಸುಟ್ಟು ಅರಣ್ಯ ಭೂಮಿಯನ್ನು ಬಿಡುಗಡೆಗೊಳಿಸಿ ನೈಸರ್ಗಿಕ ಹುಲ್ಲು ಬೆಳೆಯಲು ಅವಕಾಶ ಮಾಡಿ ಕೊಡುವುದು ಇಂದು ಅತ್ಯವಶ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.