ADVERTISEMENT

ವಿದ್ಯುತ್‌ ಪೋಲಾಗುವುದನ್ನು ತಪ್ಪಿಸಿ

ಕುಂದು ಕೊರತೆ

ಜಕ್ಕೂರು ಎಸ್.ನಾಗರಾಜು
Published 13 ಜನವರಿ 2014, 19:30 IST
Last Updated 13 ಜನವರಿ 2014, 19:30 IST

ವಿದ್ಯುತ್‌ ಇಲ್ಲದೆ ಪರಿತಪಿಸುವ ಗ್ರಾಮೀಣ ಪ್ರದೇಶಗಳು ಒಂದೆಡೆಯಾದರೆ, ವಿದ್ಯುತ್‌ ಅಪಾರವಾಗಿ ಪೋಲು ಮಾಡುವ ನಗರ ಂಗಳೂರು. ಇದಕ್ಕೆ ತಾಜಾ ಉದಾಹರಣೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 8ರ ಕೊಡುಗೆಹಳ್ಳಿ ಭದ್ರಪ್ಪ ಬಡಾವಣೆ.

ಇಲ್ಲಿನ ಗಣೇಶ ದೇವಾಲಯದಿಂದ ಭದ್ರಪ್ಪ ಬಡಾವಣೆಗೆ ಬರುವ ರಸ್ತೆಯಲ್ಲಿ ಹೈಮಾಸ್ಟ್ ದೀಪದಿಂದ ಕೇವಲ 8 ಅಡಿ ದೂರದಲ್ಲಿ ಮತ್ತೊಂದು ಕಂಬದಲ್ಲಿ ಸೋಡಿಯಂ ದೀಪ ಬೆಳಗುತ್ತಿರುತ್ತದೆ.

ಇದರ ಪಕ್ಕದಲ್ಲೇ ಇರುವ ಕಂಬದಲ್ಲಿಯೂ ತಲಾ ಒಂದೊಂದು ದೀಪ ಬೆಳಗುತ್ತ ವಿದ್ಯುತ್‌ ಪೋಲಾಗುತ್ತಿದೆ. ಇನ್ನಾದರೂ ಬೆಸ್ಕಾಂ ಅಧಿಕಾರಿಗಳು ಅಗತ್ಯಕ್ಕಿಂತ ಹೆಚ್ಚಾಗಿರುವ ಬೀದಿ ದೀಪಗಳನ್ನು ತೆರವು ಮಾಡಿ ಕತ್ತಲೆಯ ಪ್ರದೇಶಗಳಿಗೆ ವರ್ಗಾಯಿಸಿಯಾರೇ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.