ADVERTISEMENT

ವಿಭಜನೆ: ಸೂಕ್ತ ನಿರ್ಧಾರ

ಕೆ.ಸುರೇಶ, ಸೂಲಿಬೆಲೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಅತಿಯಾದ ಹೊರೆಯಿಂದ ಹೆಣಗುತ್ತಾ, ವಿವಾದಗಳ ಕೇಂದ್ರವಾಗಿ ಶೈಕ್ಷಣಿಕವಾಗಿ ಸೊರಗುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ಥಿತಿ ಚಿಂತಾಜನಕವಾಗಿದೆ. ಈಗ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಎರಡು ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನಾಗಿ ಮಾಡುತ್ತಿರುವುದು.

ಸ್ವಾಗತಾರ್ಹ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಗಳ ಕಾಲೇಜುಗಳನ್ನು ಹೊಸಕೋಟೆಯಲ್ಲಿ ಸ್ಥಾಪಿತವಾಗುತ್ತಿರುವ ಹೊಸ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತಂದಿರುವುದು ಸೂಕ್ತವಾದ ನಿರ್ಧಾರ. ಇದಕ್ಕೆ ಸರ್ಕಾರವು ಡಿ. ವಿ. ಗುಂಡಪ್ಪನವರ ಹೆಸರನ್ನಿಟ್ಟಿರುವುದು ಅತ್ಯಂತ ಸಂತಸದ ಹಾಗೂ ಸ್ವಾಗತಾರ್ಹ ಸಂಗತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.