ಕೆಲವು ಗಂಡಸರು ಮದುವೆಯಾಗುವ ಮಹಿಳೆಯ ಹೆಸರನ್ನು ಬದಲಿಸುವ ಪದ್ಧತಿ ಚಾಲ್ತಿಯಲ್ಲಿದೆ. ಈ ಮೂಲಕ ವಿವಾಹಿತೆ ತನ್ನ ತಾಯಿ ತಂದೆ ಪ್ರೀತಿಯಿಂದ ತನಗಿಟ್ಟ ಹೆಸರಿನ ಜೊತೆಗೆ ತವರು ಮನೆಯವರ ಅಡ್ಡ ಹೆಸರನ್ನೂ ಕಳೆದುಕೊಂಡು ಬಿಡುತ್ತಾಳೆ!
ಪ್ರತಿಭಟನೆ, ವಿರೋಧ, ಬಂಡಾಯ ಕೇವಲ ಗಂಡಸರ ಹಕ್ಕು. ಹೆಂಡತಿಯನ್ನು `ಅರ್ಧಾಂಗಿನಿ~ ಎಂದು ಕರೆಯುವುದು ಬರಿ ಬೊಗಳೆ, ಬೂಟಾಟಿಕೆ ಎನಿಸಿಬಿಡುತ್ತದಲ್ಲವೇ? ವಧುವಿನ ಹೆಸರನ್ನು ಬದಲಿಸುವ `ವ್ಯಾಧಿ~ ಮೂಢನಂಬಿಕೆಯಷ್ಟೇ ಅಲ್ಲ.
ಅದು ಪುರುಷ ಶ್ರೇಷ್ಠತೆಯ ವಿಕೃತ ಮನೋಭೂಮಿಕೆಯನ್ನು ಪರಿಚಯಿಸುತ್ತದೆ ಹೆಣ್ಣಿನ ಸ್ವಾತಂತ್ರ್ಯ, ವ್ಯಕ್ತಿತ್ವ ಹಾಗೂ ಐಡೆಂಟಿಟಿಯನ್ನು ಅಳಿಸಿ ಹಾಕುವ ಹುನ್ನಾರ ಇದಾಗಿದೆ. ಇದನ್ನು ಮಹಿಳೆಯರೇ ಪ್ರತಿಭಟಿಸಲು ಮುಂದಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.