ADVERTISEMENT

ವೀರಶೈವರಿಗೆ ಷರತ್ತು

ರಾಜಶೇಖರ ಹಾದಿಮನಿ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಹನ್ನೆರಡನೇ ಶತಮಾನ ಕತೆ ಬಿಡಿ. 21ನೇ ಶತಮಾನಕ್ಕೆ ಕಾಲಿಟ್ಟರೂ ಲಿಂಗಾಯತರ ಶೋಷಣೆ ತಪ್ಪಿಲ್ಲ. ಸಿಖ್‌, ಬೌದ್ಧ... ಧರ್ಮಗಳು ಸ್ವತಂತ್ರ ಧರ್ಮಗಳು. ಅವುಗಳಿಗೆ ಒಬ್ಬೊಬ್ಬರೇ ಧರ್ಮಗುರು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಬಸವಣ್ಣನೊಬ್ಬನೇ ಗುರು. ವೀರಶೈವರೂ ಲಿಂಗಾಯತರೊಟ್ಟಿಗೆ ಇರಬಹುದು. ಕಾಯಕವೇ ಕೈಲಾಸವೆಂದಿರುವ ಬಸವಣ್ಣನನ್ನು ಗುರು ಎಂದು ಮತ್ತು ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪಿಕೊಳ್ಳಲಿ.

– ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT