ಆಧುನಿಕ ಔಷಧೋಪಚಾರದಿಂದ ಗುಣಪಡಿಸಲಾಗದ ಇಂದಿನ ಹಲವಾರು ಕಾಯಿಲೆಗಳಿಗೆ ಯೋಗವೊಂದೇ ಪರಿಹಾರವಾಗಿದೆ. ದೇಶದಲ್ಲಿ ಸುಮಾರು 5000 ವರ್ಷಗಳ ಹಿಂದಿನಿಂದಲೇ ಜನ ತಮ್ಮ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡು ಅತ್ಯುತ್ತಮವಾದ ರೋಗ ನಿರೋಧಕ ಶಕ್ತಿ ಹೊಂದಿದ್ದು ಇತಿಹಾಸದಿಂದ ತಿಳಿಯುತ್ತದೆ.
ಆದರೆ ಯೋಗ ವಿಜ್ಞಾನ ಇಂದು ವ್ಯಾಪಾರೀಕರಣಗೊಳ್ಳುತ್ತಿರುವುದು ನೋವಿನ ಸಂಗತಿ. ಇದರಿಂದ ಯೋಗ ತರಬೇತಿಯು ಶ್ರೀಮಂತರ ಅಥವಾ ಉಳ್ಳವರ ಸ್ವತ್ತಾಗದಿರಲಿ. ಕೆಲ ತರಬೇತಿ ಕೇಂದ್ರಗಳು ಜನರಿಗೆ ಉಚಿತ ತರಬೇತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ.
ಒಟ್ಟಿನಲ್ಲಿ ಯೋಗ ವಿಜ್ಞಾನವು ಅದರಲ್ಲಿ ನಂಬಿಕೆ ಇರುವವರೆಲ್ಲರಿಗೂ ಉಚಿತವಾಗಿ ದೊರೆಯುವಂತೆ ಆಗಬೇಕು. ಜಗತ್ತಿಗೇ ಕೊಡುಗೆ ನೀಡಿದ ನಮ್ಮ ದೇಶದ ಯೋಗವು ಇಲ್ಲಿರುವ ಜನರಿಗೇ ಸಿಗದೆ ಹೋದರೆ ಅಥವಾ ಅಪರಿಚಿತವಾದರೆ ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.