ADVERTISEMENT

ಶಿಕ್ಷಕರ ನೇಮಕಾತಿ ಅಧಿಸೂಚನೆ ಎಂದು?

ವೀರೇಶ್ ಬಾಬು ಸಿ.ಎಸ್., ಜಗಳೂರು (ತಾ.)
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಾಲ್ಕು ಸಾವಿರ ಶಿಕ್ಷಕರ ನೇಮಕ ಮಾಡುವುದಾಗಿ ಹೇಳಿದ್ದಾರೆ. ನವೆಂಬರ್‌ನಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿ ಅರ್ಜಿ ಆಹ್ವಾನಿಸಲಾಗುವುದು ಎಂದಿದ್ದರು.

ಆದರೆ ನವೆಂಬರ್ ಮುಗಿದು ಡಿಸೆಂಬರ್ ಹತ್ತಿರ ಬಂದರೂ ನೇಮಕಾತಿ ಅಧಿಸೂಚನೆ ಸಹ ಹೊರಬಿದ್ದಿಲ್ಲ. ಸರ್ಕಾರದ/ ಸಚಿವರ ವಿಳಂಬ ನೀತಿಯನ್ನು 3 ವರ್ಷಗಳಿಂದಲೂ ನೇಮಕಾತಿಗಳಿಲ್ಲದೇ ಡಿ.ಇಡಿ/ ಟಿ.ಸಿ.ಎಚ್. ಪದವೀಧರರು ಮೂಕಬಸವಣ್ಣನಂತೆ ಸಹಿಸಿ ಕೊಂಡಿದ್ದಾರೆ. ಸಚಿವರಾದ ಕಾಗೇರಿಯವರಿಗೆ ನಿರುದ್ಯೋಗಿಗಳ ಕೂಗು ಕೇಳುತ್ತಿಲ್ಲವೇ? ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಿರುವರೇ?

ಅತಿ ಶೀಘ್ರದಲ್ಲಿ 4000 ಕಾಯಂ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗೆ ಚಾಲನೆ ನೀಡಿ ಎಂಬುದೊಂದೇ ಲಕ್ಷಾಂತರ ಡಿ.ಇಡಿ/ ಟಿ.ಸಿ.ಎಚ್. ಪದವೀಧರರ ಬೇಡಿಕೆಯಾಗಿದೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.