ADVERTISEMENT

ಶಿವಾಜಿನಗರಕ್ಕೆ ಬಸ್ ವ್ಯವಸ್ಥೆ

ಮಂಗಳಾ ನಾಗರಾಜು, ಬಿಇಎಲ್ ಬಡಾವಣೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಮಾಗಡಿ ರಸ್ತೆಯ ಅಂಜನಾನಗರದಿಂದ ಮೆಜೆಸ್ಟಿಕ್ ಹಾಗೂ ಶಿವಾಜಿನಗರಕ್ಕೆ ಹೋಲಿಸಿದಲ್ಲಿ ಕೆ.ಆರ್. ಮಾರುಕಟ್ಟೆಗೆ ಸಾಕಷ್ಟು ಬಸ್ಸುಗಳಿವೆ. ಆದರೆ ಅಂಜನಾನಗರಕ್ಕೆ ಹೊಂದಿಕೊಂಡಿರುವ ಬಿಇಎಲ್ ಬಡಾವಣೆ, ತುಂಗಾನಗರ, ಹೇರೋಹಳ್ಳಿ ಇತ್ಯಾದಿ ಬಡಾವಣೆಗಳಿಂದ ವಿಧಾನಸೌಧ, ಶಿವಾಜಿನಗರ, ಎಂಜಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ನಿತ್ಯ ಪ್ರಯಾಣಿಸುವ ಸಾಕಷ್ಟು ಪ್ರಯಾಣಿಕರು ಈ ಭಾಗದಲ್ಲಿದ್ದಾರೆ.

ಇವರೆಲ್ಲರೂ ದಿನ ನಿತ್ಯ ಎರಡರಿಂದ ಮೂರು ಬಸ್ಸು ಬದಲಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಕಚೇರಿಗೆ ಸಮಯಕ್ಕೆ ಸರಿಯಾಗಿ ಹೋಗಲಾಗದೆ ಹಲವರು ಪರಿತಪಿಸುತ್ತಲೂ ಇದ್ದಾರೆ. ಇಷ್ಟು ಮಾತ್ರವಲ್ಲದೆ ಈ ಭಾಗದಲ್ಲಿ ವೋಲ್ವೊ ಬಸ್ಸುಗಳ ಸಂಚಾರ ಇಲ್ಲದಿರುವುದೂ ಹಲವರ ಸಮಸ್ಯೆ.

ಇದರಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಾಗಡಿ ರಸ್ತೆಯ ಅಂಜನಾನಗರದಿಂದ ಶಿವಾಜಿನಗರ, ಎಂ.ಜಿ. ರಸ್ತೆ ಕಡೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ. ಜತೆಗೆ ವೋಲ್ವೊ ಬಸ್ಸುಗಳ ಸಂಚಾರವನ್ನೂ ಆರಂಭಿಸಿದಲ್ಲಿ ಈ ಭಾಗದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.