ADVERTISEMENT

ಶಿವಾಜಿನಗರಕ್ಕೆ ಹೆಚ್ಚು ಬಸ್ ಬೇಕು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST

ಮಾರತ್‌ಹಳ್ಳಿಯಿಂದ ಶಿವಾಜಿನಗರಕ್ಕೆ ಬಸ್ಸುಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲೂ ಸಂಜೆ 6.30ರ ನಂತರವಂತೂ ಬಸ್ಸುಗಳು ಸಿಗದೆ ಒದ್ದಾಟ. ವೈಟ್‌ಫೀಲ್ಡ್, ಮಾರತ್‌ಹಳ್ಳಿಯಿಂದ ಮೆಜೆಸ್ಟಿಕ್‌ಗೆ ಸಾಲುಗಟ್ಟಲೆ ಬಸ್ಸುಗಳು ತೆರಳುವಾಗ ಒಂದೋ ಎರಡೋ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಶಿವಾಜಿನಗರ ಕಡೆ ತೆರಳುತ್ತವೆ.

ಹೀಗಾಗಿ ಸಂಜೆಯ ನಂತರವಂತೂ ಶಿವಾಜಿನಗರ ಕಡೆ ಹೋಗಬೇಕಾದ ಪ್ರಯಾಣಿಕರ ಸ್ಥಿತಿ ಚಿಂತಾಜನಕ. ಮಾರತ್‌ಹಳ್ಳಿ, ಕೋಡಿಹಳ್ಳಿ ಮತ್ತು ದೊಮ್ಮಲೂರಿನ ವಿವಿಧ ಸಂಸ್ಥೆಗಳಲ್ಲಿ ನೌಕರಿ ಮಾಡುವವರು ಈಗಿರುವ ಒಂದೆರಡು ಬಸ್‌ಗಳಲ್ಲೇ ಶಿವಾಜಿನಗರಕ್ಕೆ ಹೋಗಬೇಕು.

ಮಾರತ್‌ಹಳ್ಳಿಯಿಂದಲೇ ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ ದೊಮ್ಮಲೂರು ಬರುವ ಹೊತ್ತಿಗಂತೂ ಒಂದು ಹೆಜ್ಜೆ ಇಡಲೂ ಸ್ಥಳವಿಲ್ಲದಂತಿರುತ್ತದೆ. ಹಾಗೂ ಹೀಗೂ ಬಸ್ ಒಳಗೆ ಹತ್ತಿದರಂತೂ ಶಿವಾಜಿನಗರದವರೆಗೆ ಉಸಿರು ಬಿಗಿಹಿಡಿದುಕೊಂಡೇ ನಿಂತಿರಬೇಕಾಗುತ್ತದೆ.
ಆದ್ದರಿಂದ ಸಂಬಂಧಪಟ್ಟವರು  ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಮಾರತ್‌ಹಳ್ಳಿಯಿಂದ ಶಿವಾಜಿನಗರಕ್ಕೆ ಸಂಜೆಯ ವೇಳೆ ಅಂದರೆ ಕಚೇರಿ ಬಿಡುವ ಹೊತ್ತಿಗೆ ಹೆಚ್ಚು ಬಸ್ ಸಂಚರಿಸುವಂತೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.

ADVERTISEMENT

ಇಲ್ಲಿ ಇನ್ನೊಂದು ವಿಷಯ. ‘ಈಗಾಗಲೆ ಮೆಜೆಸ್ಟಿಕ್ ಕಡೆಗೆ ಸಾಕಷ್ಟು ಬಸ್ ಇವೆ. ಅದರಲ್ಲಿ ಪ್ರಯಾಣಿಸಿ ರಿಚ್ಮಂಡ್ ಸರ್ಕಲ್‌ನಲ್ಲಿ ಇಳಿದು ಬೇರೆ ಬಸ್ ಮೂಲಕ ಶಿವಾಜಿನಗರ ತಲುಪಿ’ ಎಂಬ ಸಿದ್ಧ ಉತ್ತರ, ಉಚಿತ ಸಲಹೆ ಬೇಡ. ಏನಿದ್ದರೂ ನೇರ ಬಸ್ ಬೇಕು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.