ಬೆಂಗಳೂರು ಮಹಾನಗರ ಪಾಲಿಕೆ ಬಡಾವಣೆ (ಬಿಸಿಸಿ ಲೇಔಟ್) ಅತ್ತಿಗುಪ್ಪೆ ವಾರ್ಡ್ ನಂ.132ರಲ್ಲಿ ಇರುವಂತಹ ರೈಲ್ವೆ ಹಳಿ ಪಕ್ಕದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯ ಸುಮಾರು ಮೂರು ವರ್ಷ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಉಪಯೋಗಿಸಿದೆ ಹಾಗೆಯೇ ಬೀಗ ಹಾಕಿ ಬಿಟ್ಟಿರುವುದರಿಂದ ಶೌಚಾಲಯ ಈಗ ಪಾಳುಬೀಳುವ ಸ್ಥಿತಿಗೆ ಬಂದಿದೆ.
ತೆರಿಗೆದಾರರ ಹಣದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಶೌಚಾಲಯ ಈಗ ಯಾವುದೇ ಉಪಯೋಗವಿಲ್ಲದಂತಾಗಿದೆ. ಇದರ ಬಗ್ಗೆ ಸಂಬಂಧಿಸಿದ ಜನನಾಯಕರು, ಪಾಲಿಕೆ ಸದಸ್ಯರು ಖುದ್ದು ಪರಿಶೀಲಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೆ.
-ವೈ.ಕೆ.ನಂಜುಂಡರಾವ್
ಬಸ್‌ಗಳ `ಪೆರೇಡ್' ನಿಲ್ಲಲಿ
ಉಲ್ಲಾಳು ಉಪನಗರದಿಂದ ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಕಡೆಗೆ ಹೊರಡುವ ಬಸ್ಸುಗಳು ಒಂದರ ಹಿಂದೆ ಒಂದರಂತೆ `ಪೆರೇಡ್' ರೀತಿ ಉಲ್ಲಾಳು ಉಪನಗರದಿಂದ ಹೊರಡುತ್ತವೆ. ಸುಮಾರು ಐದಾರು ಬಸ್ಸುಗಳು ಏಕಕಾಲಕ್ಕೆ ಹೊರಡುತ್ತಿವೆ.
ಹೀಗಾಗಿ ಮುನೇಶ್ವರ ಬಸ್‌ನಿಲ್ದಾಣ, ಇತರೆ ನಿಲ್ದಾಣಗಳಲ್ಲಿ ಪ್ರಯಾಣಿಕರು ಜಾತ್ರೆ ರೀತಿಯಲ್ಲಿ ನಿಂತಿರುತ್ತಾರೆ. ಕೆಲವೊಮ್ಮೆ 20-30 ನಿಮಿಷವಾದರೂ ಕೆ.ಆರ್.ಮಾರ್ಕೆಟ್ ಹಾಗೂ ಮೆಜೆಸ್ಟಿಕ್ ಕಡೆಗೆ ಬಸ್ಸುಗಳು ಬರುವುದೇ ಇಲ್ಲ.
ಸ್ಯಾಟಲೈಟ್, ಉಲ್ಲಾಳು ಉಪನಗರ ನಡುವೆ ಸಂಚರಿಸುವ ಅಟಲ್ ಸಾರಿಗೆ ಬಸ್‌ನ ಕಥೆಯೂ ಇದೇ ಆಗಿದೆ. ಸಾರಿಗೆ ಅಧಿಕಾರಿಗಳು ಉಲ್ಲಾಳು ಉಪನಗರದಿಂದ ಇತರೆ ಕಡೆಗೆ ಸರಿಯಾದ ವೇಳೆಗೆ ಅನುಸಾರವಾಗಿ ಹೊರಡುವಂತೆ ಕ್ರಮ ಕೈಗೊಳ್ಳಬೇಕು. ಬಸ್ಸುಗಳು `ಪೆರೇಡ್' ಮಾಡುವುದನ್ನು ತಪ್ಪಿಸಬೇಕು.
-ಮುನೇಶ್ವರನಗರ ನಿವಾಸಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.