ADVERTISEMENT

ಸಂಚಾರಿ ಪೊಲೀಸರನ್ನು ನೇಮಿಸಿ

ಡಾ.ಬ್ಯಾಡರಹಳ್ಳಿ ಶಿವರಾಜ್‌
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಎಚ್‌ಎಸ್‌ಆರ್‌ ಬಡಾವಣೆಗೆ ಹೊಂದಿಕೊಂಡಿರುವ ರಿಂಗ್‌ ರಸ್ತೆ (ಅಗರ ಡಿಪೋ ಮತ್ತು ಮಂತ್ರಿ ಅಪಾರ್ಟ್‌ಮೆಂಟ್‌ ಎದುರಿಗಿರುವ)ಯಲ್ಲಿ ನಿತ್ಯ ಸಾವಿರಾರು ವಾಹನ ಸಂಚಾರವಿರುವುದು ಗೊತ್ತಿರುವ ಸತ್ಯ. ಕಾರಣ ಐ.ಟಿ.ಬಿ.ಟಿ. ಕಂಪನಿಗಳು ಹೆಚ್ಚಾಗಿರುವುದರಿಂದ ದಟ್ಟಣೆಯೂ ಅಷ್ಟೇ ಇರುತ್ತದೆ.

ಜೆ.ಎಸ್‌.ಎಸ್‌. ಮಹಿಳಾ ಕಾಲೇಜಿನ ಎದುರಿಗಿರುವ ಫ್ಲೈಓವರ್‌ನಿಂದ ಇಳಿದು ವೇಗವಾಗಿ ಬರುವ ವಾಹನಗಳು ನಿಧಾನವಾಗಿ ಬರುವುದೇ ಇಲ್ಲ. ಸಿಲ್‌್ಕಬೋರ್ಡ್ ಕಡೆಯಿಂದ ಬರುವ ಪ್ರಯಾಣಿಕರೆಲ್ಲಾ ಅಗರ ಡಿಪೋ ಸ್ಟಾಫ್‌ ಇಳಿದು ಮಂತ್ರಿ ಅಪಾರ್ಟ್‌ಮೆಂಟ್‌ ಕಡೆ ಬರಬೇಕಾದರೆ ರಸ್ತೆ ದಾಟಬೇಕು. ಕಾರಣ ಈ ಭಾಗದಲ್ಲಿ ಹಲವಾರು ಕಡೆಯಿಂದ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ.

ಈ ರಿಂಗ್‌ ರಸ್ತೆಯನ್ನು ದಾಟಿಯೇ ಹೋಗಬೇಕು. ಆಕ್‌್ಸಫರ್ಡ್ ಕಾಲೇಜು ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಫ್ರೀಡಂ ಇಂಟರ್‌ ನ್ಯಾಷನಲ್‌ ಸ್ಕೂಲ್‌, ಶಕುಂತಲಾದೇವಿ ಪದವಿ ಪೂರ್ವ ಕಾಲೇಜುಗಳಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ಈ ಮಾರ್ಗವಾಗಿಯೇ ಚಲಿಸಿ ರಸ್ತೆ ದಾಟಲು ಹರಸಾಹಸಪಡುತ್ತಾರೆ. ವಯೋವೃದ್ಧರಂತ ರಸ್ತೆ ದಾಟಲು 15 ನಿಮಿಷ ಕಾಯುವುದುಂಟು, ಅದೂ ಅಲ್ಲದೇ ರಸ್ತೆ ದಾಟಲು ಹೋಗಿ ಗಂಭೀರ ಸ್ವರೂಪದ ಗಾಯಗಳ ಜೊತೆಗೆ ಕೆಲವರಿಗೆ ಪ್ರಾಣಹಾನಿಯೂ ಆಗಿದೆ.

ಅಗರ ಡಿಪೋ ಸ್ಟಾಪ್‌ನ ಎರಡು ರಸ್ತೆ (ರಿಂಗ್‌)ಗೆ ಸುಮಾರು 50 ಅಡಿಗಳ ಅಂತರದಲ್ಲಿ ರಸ್ತೆ ಉಬ್ಬುಗಳನ್ನು ತುರ್ತಾಗಿ ನಿರ್ಮಿಸಿ, ಇಲ್ಲವಾದರೆ ಕಾಯಂ ಆಗಿ ಟ್ರಾಫಿಕ್‌ ಪೊಲೀಸರನ್ನು ನೇಮಿಸಿ ಮುಂದೆ ಆಗಬಹುದಾದ ಅಪಘಾತಗಳನ್ನು ತಪ್ಪಿಸಿ ಜೀವ ಉಳಿಸಿ ಎಂದು ಸಂಬಂಧಿಸಿದವರಲ್ಲಿ ವಿನಂತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.