ADVERTISEMENT

ಸಕಾಲಿಕ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST

‘ರೈಲ್ವೆ: ಏಕಸ್ವಾಮ್ಯ ಇಲ್ಲದ ಖಾಸಗಿ ವ್ಯವಸ್ಥೆ ಬರಲಿ’ ಲೇಖನದಲ್ಲಿ ಕ್ಯಾಪ್ಟನ್‌ ಗೋಪಿನಾಥ್‌ ಅವರು ವ್ಯಕ್ತಪಡಿಸಿರುವ ವಿಚಾರಗಳು ಸರಿಯಾಗಿವೆ (ಪ್ರ.ವಾ., ಅ.8). ವಿಮಾನ ಯಾನ ಕ್ಷೇತ್ರದಲ್ಲಿ ಖಾಸಗಿಯವರು ಪ್ರವೇಶಿಸಬಹುದಾದರೆ ರೈಲ್ವೆಯಲ್ಲಿ ಯಾಕೆ ಬೇಡ? ಹೊಸ ರೈಲಿನ ಬೇಡಿಕೆ ಬಂದಾಗಲೆಲ್ಲ ಸಂಪನ್ಮೂಲಗಳ ಕೊರತೆಯ ನೆಪವೊಡ್ಡಿ ತಳ್ಳಿಹಾಕಲಾಗುತ್ತದೆ.

ಖಾಸಗಿಯವರು ಬಂಡವಾಳ ಹೂಡಿ ಈ ಕೊರತೆಯನ್ನು ನಿವಾರಿಸಬಹುದಾದರೆ ತೆರೆದ ಬಾಹುಗಳಿಂದ ಅದನ್ನು ಸ್ವಾಗತಿಸಬೇಕು. ಸರ್ಕಾರಕ್ಕೂ ಇದರಿಂದ ಆದಾಯ ನಿಶ್ಚಿತ. ಜನರಿಗೆ ರೈಲಿನ ಸೌಕರ್ಯ ಲಭಿಸುತ್ತದೆ. ಈ ನಿಟ್ಟಿನಲ್ಲಿ ಒಮ್ಮತ ಮೂಡಿ ಸಕಾರಾತ್ಮಕ ನಿರ್ಧಾರ ಬಂದೀತೆ?
-ವೆಂಕಟೇಶ ಮುದಗಲ್, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT