ADVERTISEMENT

ಸಭ್ಯತೆ ಮೀರದಿರಲಿ

ರಾಜಶೇಖರ ಹಾದಿಮನಿ
Published 6 ಸೆಪ್ಟೆಂಬರ್ 2017, 19:30 IST
Last Updated 6 ಸೆಪ್ಟೆಂಬರ್ 2017, 19:30 IST

ಲಿಂಗಾಯತ ಧರ್ಮದ ಬಗ್ಗೆ ಪುಂಖಾನುಪುಂಖ ಹೇಳಿಕೆಗಳು ಬರುತ್ತಿವೆ. ಅದಕ್ಕಾಗಿ ನಾನು ‘ಪ್ರಜಾವಾಣಿ’ಗೆ ಆಭಾರಿಯಾಗಿದ್ದೇನೆ. ‘ಧರ್ಮ ಒಡೆಯಬೇಡಿ!’ ಎಂದು ಅ.ಸಿ. ಹಿರೇಮಠ ಬರೆದಿದ್ದಾರೆ (ವಾ.ವಾ., ಆಗಸ್ಟ್‌ 30). ವೀರಶೈವದ ಬಗ್ಗೆ ಬರೆಯಲು ನಾನು ಅಶಕ್ತ. ಏಕೆಂದರೆ, ಆ ಧರ್ಮಕ್ಕೆ ಇತರ ಧರ್ಮೀಯರು ‘ಕಪ್ಪು’ ಬಳಿಯಬಾರದು. ಹೊರಗಿನವರು ಹೇಳಿಕೆ ನೀಡಬಾರದು.

ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರವಿದೆ. ಸರ್ಕಾರದ ತೀರ್ಮಾನಗಳ ಅನುಷ್ಠಾನಕ್ಕೆ ಕಾರ್ಯಾಂಗ ಇದೆ. ಶಾಸಕಾಂಗ
ಹಾಗೂ ಕಾರ್ಯಾಂಗಗಳ ಲೋಪಗಳನ್ನು ತಿದ್ದಲು ನ್ಯಾಯಾಂಗವಿದೆ. ಎಲ್ಲವೂ ನಮ್ಮ ಸಂವಿಧಾನದ ಅಡಿಯಲ್ಲಿಯೇ ನಡೆಯಬೇಕು. ನಾಗರಿಕ ಸಮಾಜದಲ್ಲಿ ಅವೆಲ್ಲವೂ ಸಭ್ಯ ರೀತಿಯಲ್ಲಿ ನಡೆಯಬೇಕು.

–ಧಾರವಾಡ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.