ಹೊಸಕೋಟೆ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಬೆಂಗಳೂರಿನ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಹಲವು ಮಂದಿ ನೆಲೆಸಿದ್ದಾರೆ.
ಹೊಸಕೋಟೆಯಿಂದ ಕೆ.ಆರ್. ಮಾರುಕಟ್ಟೆಗೆ ಚಲಿಸುವ 317ನೇ ನಂಬರ್ ಬಸ್‌ನಲ್ಲಿ ಇವರೆಲ್ಲ ಪ್ರಯಾಣಿಸುತ್ತಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಬೆಳಿಗ್ಗೆ 7-50 ರಿಂದ 8-30ರವರೆಗೆ 317 ನಂಬರಿನ ಬಸ್ಸು ಬರುತ್ತಿಲ್ಲ.
ಇದರಿಂದ ಉದ್ಯೋಗಸ್ಥರೆಲ್ಲ ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಲು ಸಾಧ್ಯವಾಗದೆ ಎರಡು ಮೂರು ಬಸ್ಸು ಹಿಡಿದು ಪ್ರಯಾಣಿಸಬೇಕಾಗಿದೆ. ಬಸ್ ಹಿಡಿಯುವಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಕಚೇರಿಗೆ ವಿಳಂಬವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು. ಕನಿಷ್ಠ ಮೂರು ಬಸ್‌ಗಳನ್ನಾದರೂ ಬಿಡಬೇಕೆಂದು ಕೇಳಿಕೊಳ್ಳುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.