ADVERTISEMENT

ಸಮಸ್ಯೆ ಮುನ್ನೆಲೆಗೆ...

ಡಾ.ಸಿ.ಆರ್.ಚಂದ್ರಶೇಖರ್
Published 9 ಡಿಸೆಂಬರ್ 2016, 19:30 IST
Last Updated 9 ಡಿಸೆಂಬರ್ 2016, 19:30 IST

ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿದಿನ ಲಕ್ಷಕ್ಕಿಂತ ಹೆಚ್ಚು ಜನ ಬಂದು ಸಂಭ್ರಮಿಸಿದರು. ಸಂತೋಷ. ಆದರೆ ಸಮ್ಮೇಳನಾಧ್ಯಕ್ಷರ ಭಾಷಣದಿಂದ ಹಿಡಿದು, ಸಮ್ಮೇಳನದ ಆಗುಹೋಗುಗಳನ್ನು ಅವಲೋಕಿಸಿದರೆ, ಸಾಹಿತ್ಯವನ್ನು ಬಿಟ್ಟು ಮಿಕ್ಕೆಲ್ಲ ಸಮಸ್ಯೆಗಳ ಚರ್ಚೆಯಾಯಿತು. ಕನ್ನಡ ವಿಜ್ಞಾನ, ವೈದ್ಯ ಸಾಹಿತ್ಯವು ಸಂಘಟಕರಿಗೆ ಮರೆತೇ ಹೋಯಿತು.

ಆದ್ದರಿಂದ ಇನ್ನು ಮುಂದೆ ಈ ಸಾಹಿತ್ಯ ಸಮ್ಮೇಳನವನ್ನು ಅಖಿಲ ಭಾರತ ಕನ್ನಡಿಗರ ಸಮಸ್ಯೆಗಳ ಸಮ್ಮೇಳನ ಎಂದು ಕರೆಯಲು ಕಸಾಪದ ಎಲ್ಲ ಪದಾಧಿಕಾರಿಗಳಿಗೆ ವಿನಂತಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.