ADVERTISEMENT

ಸರಿಯಾದ ಕಾಳಜಿ

ಬಸವರಾಜ ಹುಡೆದಗಡ್ಡಿ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST

‘ನ್ಯಾಯಾಧೀಶರು ಇಂಗ್ಲಿಷ್‌ ಭಾಷೆಯಲ್ಲಿ ಕೊಡುವ ತೀರ್ಪನ್ನು ಕಕ್ಷಿದಾರರಿಗೆ ತಿಳಿಯುವ ಭಾಷೆಗೆ ಭಾಷಾಂತರ ಮಾಡಿಕೊಡಬೇಕು’ ಎಂದು ಈಚೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೇಳಿದ್ದಾರೆ. ಇದು ಸರಿಯಾದ ಕಾಳಜಿ.

ಇಂಗ್ಲಿಷ್‌ ಜ್ಞಾನದ ಕೊರತೆಯಿಂದಾಗಿ, ಅನೇಕ ಸಂದರ್ಭಗಳಲ್ಲಿ ತೀರ್ಪಿನಲ್ಲಿ ಮಾಡಿದ ವಿಶ್ಲೇಷಣೆ ಕಕ್ಷಿದಾರರಿಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಇದರಿಂದ ತೀರ್ಪಿನಿಂದ ಅವರಿಗಾದ ಅನುಕೂಲ ಅಥವಾ ಅನನುಕೂಲಗಳ ಬಗ್ಗೆ ಸಂಪೂರ್ಣ ತಿಳಿವಳಿಕೆ ಸಿಗುವುದಿಲ್ಲ.

ಹೈಕೋರ್ಟ್‌ಗಳಲ್ಲಿ ಹೊರರಾಜ್ಯದ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುವುದರಿಂದ ವ್ಯಾಜ್ಯದ ದಾಖಲೆಗಳನ್ನು ಇಂಗ್ಲಿಷ್‌ ಭಾಷೆಗೆ ತರ್ಜುಮೆ ಮಾಡುವ ವ್ಯವಸ್ಥೆ ಇದೆ. ಅದಕ್ಕಾಗಿಯೇ ಸಿಬ್ಬಂದಿ ಇದ್ದಾರೆ. ಅವರ ಮೂಲಕವೇ ತೀರ್ಪುಗಳನ್ನೂ ಪ್ರಾದೇಶಿಕ ಭಾಷೆಗೆ ಭಾಷಾಂತರಿಸಲು ವ್ಯವಸ್ಥೆ ಮಾಡಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.