ADVERTISEMENT

ಸರ್ಕಾರಕ್ಕೊಂದು ಮನವಿ

ನಿವೇದಿತಾ ಶೆಣೈ, ಮಂಗಳೂರು
Published 22 ಜನವರಿ 2014, 19:30 IST
Last Updated 22 ಜನವರಿ 2014, 19:30 IST

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷಾ ಮಾಧ್ಯ­ಮದಲ್ಲಿ ನೀಡುವ ಕುರಿತು ಸುಪ್ರೀಂ ಕೋರ್ಟ್‌­ನ ಸಾಂವಿಧಾನಿಕ ಪೀಠ ವಿಚಾರಣೆ ಆರಂ­ಭಿ­ಸಿದೆ. ಇಲ್ಲಿ ಸರ್ಕಾರ ಮಂಡಿಸ­ಬೇಕಾದ ಒಂದು ವಾದ ಇದೆ.

ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ತಾನು ಎಲ್ಲ ಶಾಲೆಗಳಲ್ಲೂ ಕಲಿಸುತ್ತೇನೆ. ಇಂಗ್ಲಿಷ್‌ ಕಲಿ­ಯುವ ಯಾರ ಹಕ್ಕನ್ನೂ ತಾನು ಮೊಟಕು­ಗೊಳಿಸುವುದಿಲ್ಲ. ಆದರೆ ಶಿಕ್ಷಣದ ಮಾಧ್ಯಮ ಕನ್ನಡವೇ ಆಗಿರುತ್ತದೆ ಎಂದು ಸರ್ಕಾ­ರದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ವಿವರಿಸಬೇಕಿದೆ. ಮಾತೃಭಾಷಾ ಮಾಧ್ಯ­ಮದ ಪರವಾಗಿ ಒಂದು ತೀರ್ಪು ದೊರೆತರೆ, ಇಂಗ್ಲಿಷ್‌ ವ್ಯಾಮೋಹಿಗಳ ಆಟಾಟೋಪ ಕಡಿಮೆಯಾಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.