ADVERTISEMENT

ಸಾರಿಗೆ ಸಚಿವರು ಆಲೋಚಿಸಲಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಬಸ್ ಪ್ರಯಾಣ ದರ ಏರಿಸಿರುವುದು ಸರಿಯಲ್ಲ ಎಂದು ಸರ್ಕಾರವನ್ನು ಎಚ್ಚರಿಸುವ ಮೂಲಕ (ಪ್ರಜಾವಾಣಿ ಸಂಪಾದಕೀಯ: ಅ. 2) ತನಗಿರುವ ಜನಪರ ಕಾಳಜಿಯನ್ನು ವ್ಯಕ್ತಗೊಳಿಸಿದೆ. ದರ ಏರಿಕೆಯ ಬದಲು ಅದಕ್ಕಿರುವ ಪರ್ಯಾಯ ಮಾರ್ಗಗಳನ್ನು ಸೂಚಿಸಿರುವುದನ್ನು ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಬೇಕು.

ದರ ಏರಿಕೆಯೂ ಕೂಡ ಅವೈಜ್ಞಾನಿಕ ರೀತಿಯಲ್ಲಿದೆ. ಸರ್ಕಾರ ಹೇಳಿಕೊಂಡಿರುವ ಪ್ರಮಾಣದಲ್ಲಿ ಅಲ್ಲ. ಹಳೆಯ ದರ 20 ರೂಪಾಯಿ ಇದ್ದದ್ದು ರೂ. 22ಕ್ಕೆ; 72 ರೂಪಾಯಿ ಇದ್ದದ್ದು 75ಕ್ಕೆ ಏರಿದ್ದರೆ, 15 ರೂಪಾಯಿ ಇದ್ದದ್ದನ್ನು ರೂ. 18ಕ್ಕೆ ಏರಿಸಿರುವದು ಆಶ್ಚರ್ಯ.
ಏಕಾಏಕಿ ಬಸ್ ಪ್ರಯಾಣ ದರ ಏರಿಸುವ ಮೂಲಕ ರಾಜ್ಯ ಸರಕಾರ ಬಡವನ ಹೆಗಲಿಗೆ ಮತ್ತಷ್ಟು ಭಾರ ಹೇರುತ್ತಿರುವುದನ್ನು ಸಾರಿಗೆ ಸಚಿವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಸರ್ಕಾರ ಈ ದರ ಏರಿಕೆ ನೀತಿಯನ್ನು ಮರು ಪರಿಶೀಲಿಸಿ ಜನಪರವಾದ ನಿರ್ಧಾರ ಕೈಗೊಳ್ಳಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.