ಸದಾಶಿವನಗರ ಬಾಷ್ಯಂ ವೃತ್ತದ ಸ್ಯಾಂಕಿ ರಸ್ತೆಯಲ್ಲಿ ಕಳೆದ ಎರಡು ತಿಂಗಳಿನಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಕಾರಣ ಟಾಟಾ ಇನ್‌ಸ್ಟಿಟ್ಯೂಟ್ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದು. ನಾಲ್ಕು ವರ್ಷಗಳಾದರೂ ಕಾಮಗಾರಿ ಪೂರ್ಣವಾಗದೇ ಆಮೆಗತಿಯಲ್ಲಿ ಸಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಮೇಲ್ಸೇತುವೆ ಕೆಳಭಾಗದಲ್ಲಿ ಶಿವಾಜಿನಗರಕ್ಕೆ ಹೋಗುವ ರಸ್ತೆ ಮಾಡುತ್ತಿರುವುದರಿಂದ ಶಿವಾಜಿನಗರಕ್ಕೆ ಸಂಚರಿಸುವ ವಾಹನಗಳನ್ನು ಬಾಷ್ಯಂ ವೃತ್ತದ ಮೂಲಕ ಬಿಡುತ್ತಿದ್ದಾರೆ.
ಇದರಿಂದಾಗಿ ಸ್ಯಾಂಕಿ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಅತಿಯಾದ ಸಂಚಾರ ದಟ್ಟಣೆಯಾಗುತ್ತಿದ್ದು ಗಂಟೆಗಟ್ಟಲೆ ಕಾಯಬೇಕಾಗಿದೆ. ಆದ್ದರಿಂದ ಸ್ಯಾಂಕಿರಸ್ತೆ ಕಡೆಯ ವಾಹನಗಳಿಗಾಗಿ ಹೆಚ್ಚು ಸಮಯ ಸಿಗ್ನಲ್ ಮುಕ್ತಮಾಡಬೇಕು. ಇದರಿಂದ ಸಂಚಾರದಟ್ಟಣೆ ಸಲ್ಪ ಕಡಿಮೆಯಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.