ADVERTISEMENT

ಸುರಕ್ಷೆ ಸುರಕ್ಷಿತ ಸ್ಥಳಗಳಲ್ಲಿರಲಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ, ಕುಟುಂಬ ಕಲ್ಯಾಣ ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ಏಡ್ಸ್ ನಿಯಂತ್ರಣಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸುತ್ತಿದೆ. ಉತ್ತರ ಕರ್ನಾಟಕದ ಮುಖ್ಯ ನಗರ ಹಾಗೂ ಪಟ್ಟಣಗಳಲ್ಲಿ ಎಲ್ಲೆಡೆ ನಿರೋಧ್‌ಗಳನ್ನು (ಕಾಂಡೋಮ್) ಕಬ್ಬಣ ಪೆಟ್ಟಿಗೆಗಳನ್ನು ಇರಿಸುತ್ತಿದೆ. ಇದು ಶ್ಲಾಘನೀಯ.   ಒಮ್ಮೆ ಗುಲಬರ್ಗಾ ಜಿಲ್ಲೆಯ ಶಹಾಬಾದ ಪಟ್ಟಣದಿಂದ ಜೇವರ್ಗಿಯ ಕಡೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆಯೊಂದು ನಮಗೆ ಬಹು ಅಚ್ಚರಿ ತಂದಿತು. ಹತ್ತು - ಹನ್ನೆರಡು ವರ್ಷದ ಮಗುವೊಂದು ಪೆಟ್ಟಿಗೆಯೊಳಗೆ ಏನಿರಬಹುದೆಂಬ ಕುತೂಹಲದಿಂದ ಹೆದರುತ್ತಲೇ ಕೈಹಾಕಿ ಪ್ಯಾಕ್ ಒಂದನ್ನು ತೆಗೆದುಕೊಂಡು ಪುಗ್ಗ (ಬಲೂನ್) ಇರಬಹುದೆಂದು ಭಾವಿಸಿ ಅದನ್ನು ತನ್ನ ತಾಯಿಯ ಬಳಿ ಒಯ್ದು ಕೊಟ್ಟಿತು.

 ಹೀಗಾದರೆ ಹೇಗೆ? ಪೆಟ್ಟಿಗೆ ಮಕ್ಕಳ ಕೈಗೆ ನಿಲುಕದಂತೆ ಹಾಗೂ ಗಂಡಸರಿಗೆ ತೆಗೆದುಕೊಳ್ಳಲು ಮುಜುಗರವಾಗದಂತಹ (ಸ್ತ್ರೀಯರು ಕುಳಿತುಕೊಳ್ಳುವ ಸಾರ್ವಜನಿಕ ಸ್ಥಳಗಳನ್ನು ಬಿಟ್ಟು) ಸುರಕ್ಷಿತ ಸ್ಥಳಗಳಲ್ಲಿ ಇಟ್ಟು, ಎಲ್ಲರಿಗೂ ಗೊತ್ತಾಗುವ ಹಾಗೆ ಮಾರ್ಗವನ್ನು ತೋರಿಸಿದರೆ ಉತ್ತಮವಾದೀತು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.