ADVERTISEMENT

ಸುವ್ಯವಸ್ಥಿತ ಚರಂಡಿ ಕಲ್ಪಿಸಿ

ಜಗದೀಶ್, ಲಗ್ಗೆರೆ.
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಲಗ್ಗೆರೆ ವಾರ್ಡ್ ಸಂಖ್ಯೆ 27ರಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿರುವ ಕಾರಣ ಮಳೆ ಬಂದಾಗ ರಸ್ತೆಯ ಕಸ, ಗಲೀಜು ಎಲ್ಲವೂ ಮನೆ ಮುಂದೆ ಬಂದು ನಿಂತುಕೊಳ್ಳುತ್ತದೆ. ಇದರಿಂದಾಗಿ ನಾಗರಿಕರು ಕೆಟ್ಟ ವಾಸನೆ ಸೇವಿಸುತ್ತಾ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಬಿಬಿಎಂಪಿ ಕಚೇರಿಗೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿಲ್ಲ.

ಕ್ರಮ ಕೈಗೊಂಡಿಲ್ಲ. ಕಸ ತುಂಬಿಕೊಂಡು ಹೋಗುವ ಬಿಬಿಎಂಪಿ ವಾಹನ ಇಲ್ಲಿಗೆ ವಾರಕ್ಕೋ ಅಥವಾ ಹತ್ತು ದಿನಕ್ಕೊಮ್ಮೆ ಮಾತ್ರ ಬರುತ್ತದೆ. ಬಿಬಿಎಂಪಿ ಅಧಿಕಾರಿಗಳು ಇನ್ನಾದರೂ ಚರಂಡಿ ಸುವ್ಯವಸ್ಥೆ ಮತ್ತು ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿಭಾಯಿಸುವತ್ತ ಗಮನ ಹರಿಸಲಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.