ADVERTISEMENT

ಸ್ವಯಂ ಬಂಧನ

ಕೆ.ವಿ.ಸೀತಾರಾಮಯ್ಯ, ಹಾಸನ
Published 13 ಜುಲೈ 2016, 19:30 IST
Last Updated 13 ಜುಲೈ 2016, 19:30 IST

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ನಿಂದಿಸಿ ಬೆದರಿಸಿರುವ ಮುಖ್ಯಮಂತ್ರಿಗಳ ಆಪ್ತ ಮರಿಗೌಡರ ನಿರೀಕ್ಷಣಾ ಜಾಮೀನು ಮೈಸೂರಿನ ಸೆಷನ್ಸ್‌ ನ್ಯಾಯಾಲಯದಲ್ಲಿ ವಜಾ ಆಗಿರುವುದು ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಸಾರುತ್ತದೆ.

ಆದರೆ ನಿಜಕ್ಕೂ ಮರಿಗೌಡರು ಇಂದಿಗೂ ಒಂದು ರೀತಿಯಲ್ಲಿ ಬಂಧನದಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಅಂದರೆ ಅವರು ಪೊಲೀಸರ ಬಂಧನದಲ್ಲಿ ಇಲ್ಲದಿದ್ದರೂ ಗುಪ್ತ ಸ್ಥಳದಲ್ಲಿ ಅವಿತುಕೊಂಡು ತಮ್ಮನ್ನು ತಾವೇ ಬಂಧಿಸಿ ಕೊಂಡಿದ್ದಾರೆ. 

ಜಾಮೀನು ನಿರಾಕರಣೆಯಾಗಿರುವುದರಿಂದ ಈಗ ಅವರು ಪೊಲೀಸರ ಅತಿಥಿಯಾಗಬಹುದು. ಬಂಧನದಲ್ಲಿದ್ದರೂ ಅವರನ್ನು ಜೈಲಿನಲ್ಲಿ ಚೆನ್ನಾಗಿ ನೋಡಿಕೊಳ್ಳುವಂತೆ ಆದೇಶವಿರುತ್ತದೆ.

ರಾಜಕೀಯ ಕೃಪಾಪೋಷಣೆಯೊಂದಿದ್ದರೆ ಏನನ್ನಾದರೂ ಜಯಿಸಿಕೊಳ್ಳಬಹುದು ಎಂಬ ಭಾವನೆ ಹಲವರಲ್ಲಿದೆ. ಆದರೆ ಕೆಟ್ಟದಾಗಿ ನಡೆದುಕೊಳ್ಳುವವರು ಯಾರೇ ಆದರೂ ಅಂತಹವರಿಗೆ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ ಶಿಕ್ಷೆ ಆಗಬೇಕು. ಆಗ ಇಂತಹ ಭಾವನೆಯನ್ನು ಬದಲಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.