ADVERTISEMENT

ಹಂಗಿನರಮನೆಯಿಂದ ಸಂದೇಶ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡುತ್ತ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ ಕೊಟ್ಟಿರುವುದು ಸರಿಯಷ್ಟೆ.

ಹಾಗೆಯೇ ಭ್ರಷ್ಟಾಚಾರ ಪಿಡುಗು ವಿರುದ್ಧ ಚಳವಳಿನಿರತ ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್ ಅವರ ವಿರುದ್ಧ ಪರೋಕ್ಷವಾಗಿ ಇದು `ಪ್ರಜಾಪ್ರಭುತ್ವದ ಮೇಲೆ ಸವಾರಿ~ ಎಂದು ಚಾಟಿ ಬೀಸಿದ್ದಾರೆ.

ಆದರೆ ಈ ಮಾತು ಎಲ್ಲಿಗೆ ಮುಟ್ಟಬಹುದು? ಉಳಿದ ಹೋರಾಟನಿರತ ಚಳವಳಿಗಾರರ ಗತಿ ಏನು? ಚಳವಳಿಗಳೇ ಇಲ್ಲವಾದರೆ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಹೇಗೆ?

ರಾಷ್ಟ್ರಪತಿಗಳ ಮಾತಿನಲ್ಲಿ ಪಕ್ಷ ರಾಜಕಾರಣಿಗಳ ಮಾತಿನ ವಾಸನೆ ಇದ್ದಂತಿದೆಯಲ್ಲವೆ? ಹಂಗಿನರಮನೆಯಿಂದ ನಾವು ಮತ್ತಾವ ರೀತಿಯ ಸಂದೇಶವನ್ನು ನಿರೀಕ್ಷಿಸಬಹುದು?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.