ADVERTISEMENT

ಹಂಪಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ನಾವುಗಳು ಈಗ ಹಂಪಿಯಲ್ಲಿ ಬೀದಿಗೆ ಬಿದ್ದವರು. ಹಂಪಿ ಮಂಟಪಗಳಲ್ಲಿ ನಾವು ಹಲವಾರು ವರ್ಷಗಳಿಂದ ಜೀವನ ನಡೆಸಿದ್ದೇವೆ. ಈಗ್ಗೆ 20 ವರ್ಷಗಳಿಂದಲೂ ಸರ್ಕಾರ ಮಂಟಪಗಳನ್ನು ಬಿಡಿ ಎಂದು ಹೇಳುತ್ತಲೇ ಬಂದಿತ್ತು. ನಾವುಗಳು ಬೇರೆ ಕಡೆ ಮನೆ ಕಟ್ಟಿಕೊಡಿ ಎಂದು ಸರ್ಕಾರವನ್ನು ಕೇಳುತ್ತ ಬಂದಿದ್ದೇವೆ. ಆದರೆ ಅದಾವುದೂ ಆಗಲಿಲ್ಲ.

ಈಚೆಗೆ ಜುಲೈ 28ರ ರಾತ್ರಿ ಒಂಬತ್ತು ಗಂಟೆಗೆ ಮನೆ ಖಾಲಿ ಮಾಡಿ ಎಂದು ಸರ್ಕಾರ ನೋಟೀಸು ಕೊಟ್ಟಿತ್ತು. ಜುಲೈ 29 ರಂದು ಬೆಳಗಿನಿಂದ ಬುಲ್ಡೋಜರ್ ಬಳಸಿ ನಮ್ಮ ಮನೆಗಳನ್ನು ಕೆಡವಲಾಯಿತು. ಇದರಿಂದಾಗಿ ನಾವು ಹಂಪಿಯ ಬೀದಿಗಳಲ್ಲಿ ದಿನಗಳನ್ನು ನೂಕುವಂತಾಗಿದೆ. ಈಗ ಮನೆ ಕೆಡವಿ ಎರಡು ತಿಂಗಳಾದರೂ ಸರ್ಕಾರವಾಗಲೀ, ಹೊಸಪೇಟೆಯ ಶಾಸಕರಾಗಲಿ ನಮ್ಮ ಬಳಿ ಸುಳಿದಿಲ್ಲ.

ಮಕ್ಕಳು, ಮಹಿಳೆಯರು, ವೃದ್ಧರನ್ನು ಒಳಗೊಂಡಂತೆ ಎಲ್ಲರೂ ನಿತ್ಯವೂ ನರಕ ಅನುಭವಿಸುವಂತಾಗಿದೆ. ಹಂಪಿಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಎಂ. ಚಿದಾನಂದಮೂರ್ತಿಗಳು ನಮಗೆ ಮನೆ ಕೊಡಿಸುತ್ತಾರೆಂದು ನಾವು ಅವರಿಗಾಗಿ ಕಾಯುತ್ತಿದ್ದೇವೆ.

ಸರ್ಕಾರ ಕೆಡವಿದ 236 ಮನೆಗಳವರ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ. ಹೊರಗೆಲ್ಲೂ ಮನೆ ಇಲ್ಲದವರಿಗೆ ಮೊದಲು ಮನೆಗಳನ್ನು ಒದಗಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ.

- ಬೀದಿಗೆ ಬಿದ್ದ ನಿವಾಸಿಗಳು ( 25 ಜನರ ಸಹಿ ಇದೆ)  ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.