ADVERTISEMENT

ಹರಳಯ್ಯ ದಿನಾಚರಣೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 15:45 IST
Last Updated 21 ಫೆಬ್ರುವರಿ 2011, 15:45 IST

ಹನ್ನೆರಡನೇ ಶತಮಾನದ ಮಹಾ ಚೇತನ ಜಗಜ್ಯೋತಿ ಬಸವೇಶ್ವರರು ವಿಶ್ವಕ್ಕೆ ಸಾರಿದ ಸಾಮಾಜಿಕ ಸಮಾನತೆ ಹಾಗೂ ಶರಣರ ವಚನ ತತ್ವ ಇಂದಿಗೂ ಎಂದೆಂದಿಗೂ ಅನ್ವಯಿಸುವ ಸರಳ ಸತ್ಯ. ಸಾಮಾಜಿಕ ಕ್ರಾಂತಿಗೆ ಜೀವನವನ್ನೇ ಅರ್ಪಿಸಿದ ಹರಳಯ್ಯ ಮಧುವರಸರ ನೆನಪಿಗಾಗಿ ಮಾರ್ಚ್ 5 ಹಾಗೂ 6ರಂದು ಹುತಾತ್ಮರ ದಿನಾಚರಣೆಯನ್ನು ಬಸವ ಕಲ್ಯಾಣದಲ್ಲಿ ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ.

 ಆದರೆ ಇದನ್ನು ವಿರೋಧಿಸುವ ಕೆಲವು ಮಹನೀಯರು ಬಸವೇಶ್ವರರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಎಂದು ತಿಳಿಯಬೇಕಾಗುತ್ತದೆ. ಇದು ನಿಜಕ್ಕೂ ವಿಪರ್ಯಾಸ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.