ADVERTISEMENT

ಹಿರಿಯ ನಾಗರಿಕರಿಗೆ ಸೀಟ್ ಕೊಡಿ

ಪ್ರಜಾವಾಣಿ ವಿಶೇಷ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST

ಅಬ್ಬಬ್ಬಾ ಎಂದರೆ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ಒಂದು ಗಂಟೆ ಇರಬಹುದೇ? ಹೀಗಿರುವಾಗ ನಮ್ಮ ಯುವಕರು ಅಥವಾ ಹುಡುಗರು, ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಆಸನದಲ್ಲಿ ಕುಳಿತುಕೊಳ್ಳುವುದು ಥರವಲ್ಲ. ಅದೇ ಬಸ್‌ನಲ್ಲಿರುವ ಮುದುಕರಿಗೆ ಅಥವಾ ಮಹಿಳೆಯರಿಗೆ ಸ್ಥಳ ಬಿಟ್ಟು ಕೊಡಬೇಕು.

ಸ್ತ್ರೀಯರ ಆಸನದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುವ ಪುರುಷ ಪ್ರಯಾಣಿಕರು `ಹಿರಿಯ ನಾಗರಿಕರು' ಎಂದಿರುವ ಆಸನವನ್ನು ವಯಸ್ಸಾದವರಿಗೆ ಬಿಟ್ಟು ಕೊಟ್ಟರೆ ಅವರ ಮೆಚ್ಚುಗೆ ಅಥವಾ `ಥ್ಯಾಂಕ್ಸ್' ಸಿಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.