ADVERTISEMENT

ಹೀಗೂ ಉಂಟೇ!?

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST

ಚರಾಸ್ತಿ, ಸ್ಥಿರಾಸ್ತಿ ಸೇರಿ ₹ 183 ಕೋಟಿ ಆಸ್ತಿಯನ್ನು ಹೊಂದಿರುವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಂತ ಮನೆ ಇಲ್ಲ, ಕಾರು ಇಲ್ಲ (ಪ್ರ.ವಾ., ಏ. 21).

ಆರ್‌.ವಿ. ದೇಶಪಾಂಡೆ ಹೆಸರಿನಲ್ಲಿ ₹ 22.69 ಕೋಟಿ, ಅವರ ಹೆಂಡತಿ ಹೆಸರಿನಲ್ಲಿ ₹ 112 ಕೋಟಿ. ಇವರಿಬ್ಬರ ಹೆಸರಲ್ಲಿ ಜಂಟಿಯಾಗಿ ₹ 50 ಕೋಟಿ ಆಸ್ತಿ. ಆದರೆ ದೇಶಪಾಂಡೆ ದಂಪತಿಗೂ ಸ್ವಂತ ವಾಹನಗಳಿಲ್ಲ. ₹ 26 ಕೋಟಿ ಆಸ್ತಿ, ಸಕ್ಕರೆ ಕಾರ್ಖಾನೆ ಮಾಲೀಕರಾದ ಲಕ್ಷ್ಮಿ ಹೆಬ್ಬಾಳ್ಕರ ಅವರಿಗೂ ಸ್ವಂತ ವಾಹನವಿಲ್ಲ.

ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ, ಕೋಟಿ ಕೋಟಿ ಆಸ್ತಿ ಹೊಂದಿರುವ ಕೆಲವು ಅಭ್ಯರ್ಥಿಗಳ ಬಳಿ ಇದೇ ರೀತಿ ಮನೆ, ಕಾರು ಇಲ್ಲ ಅಂದಮೇಲೆ ಇವರು ಬಳಸುತ್ತಿರುವ ಮನೆ, ಕಾರುಗಳು ಹೇಗೆ ಬಂದವು? ಕೋಟಿಗಟ್ಟಲೆ ಆಸ್ತಿಯಿದ್ದೂ ಸ್ವಂತಕ್ಕೆ ಮನೆ, ಕಾರು ಇಲ್ಲವೆಂದರೆ ನಂಬುವುದಾದರೂ ಹೇಗೆ? ಹೀಗೂ ಉಂಟೇ!?

ADVERTISEMENT

ಹೇಗೆ ಉಂಟೆಂದರೆ... ಕಂ‍ಪನಿ, ಕಾರ್ಖಾನೆ ಹೆಸರಿಗೆ ಕಾರು; ಕಂಪನಿ– ಕಾರ್ಖಾನೆ ಹೆಸರಿನಿಂದಲೇ ಡ್ರೈವರ್ ಸಂಬಳ, ಇಂಧನ ಬರುತ್ತಿರುವಾಗ ಸ್ವಂತಕ್ಕೆ ಏಕೆ ಬೇಕು?

ಸಾರ್ವಜನಿಕವಾಗಿ ಹೇಗಿರಬೇಕೆಂಬುದನ್ನು ಇವರಿಂದ ಹೀಗೂ ಉಂಟೆಂದು ಕಲಿಯಬೇಕು.
- ಆರ್. ಸಣ್ಣಗಂಗಪ್ಪ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.