ADVERTISEMENT

ಹೀಗೂ ಉದ್ಧರಿಸಬಹುದಲ್ಲವೆ?

ಅಭಿಷೇಕ್ ಏ.ಪಡಿವಾಳ್, ಸುಳ್ಯ
Published 20 ಜನವರಿ 2015, 19:30 IST
Last Updated 20 ಜನವರಿ 2015, 19:30 IST

ಹಿಂದೂ ಮಹಿಳೆಯರು ನಾಲ್ಕೈದು ಮಕ್ಕಳನ್ನು ಹೆತ್ತು ಧರ್ಮ ಉಳಿಸಬೇಕು ಎಂದು ಬಿಜೆಪಿ ಹಾಗೂ ಹಿಂದೂ ಸಂಘ­ಟನೆ­ಗಳ ಕೆಲವು ನೇತಾರರು ಹಲವೆಡೆ ಹೇಳಿಕೆ ಕೊಟ್ಟಿ­ದ್ದಾರೆ.  ಗೃಹಸ್ಥಾಶ್ರಮ ಅಂದರೆ ಏನೆಂದು ಗೊತ್ತೇ ಇಲ್ಲದ ಸಾಧು, ಬಾಬಾಗಳೂ ಇಂತಹ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ.

ಇವರು ಗೃಹಸ್ಥ ಗಂಡಸಿನ ದೇಹದೊಳಗೆ ಪರಕಾಯ ಪ್ರವೇಶ ಮಾಡಿ, ಗೃಹಸ್ಥಾಶ್ರಮದ ಸುಖ ಅನುಭವಿಸಿದ್ದರೋ ಏನೋ!?  ಆದರೆ ಈ  ನೇತಾರರ  ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ   ಮಹಿಳಾ ಸಂಘಟನೆಗಳೇಕೆ ಚಕಾರ ಎತ್ತುತ್ತಿಲ್ಲ?

ನಮ್ಮ ಸಂಘ ಪರಿವಾರದ ನೇತಾರರು ಹೇಗೂ  ಅಡಿಗಡಿಗೆ ನಮ್ಮ ಪೂರ್ವಜರಿಗೆ ಜೆನೆಟಿಕ್ಸ್ ಎಂಜಿನಿಯರಿಂಗ್ ಹಾಗೂ ಪ್ರಣಾಳ ಶಿಶು ವಿಜ್ಞಾನ ಗೊತ್ತಿತ್ತು ಎಂದು ಪುರಾಣ ಕಥೆಗಳ ದೃಷ್ಟಾಂತ ಕೊಡುತ್ತಿದ್ದಾರಲ್ಲವೇ.  ಹಾಗಿದ್ದರೆ ಅದೇ ಪುರಾತನ ವಿಜ್ಞಾನ ಉಪಯೋಗಿಸಿ ಗಂಡಸರೂ ಗರ್ಭ ಧರಿಸುವಂತೆ ಮಾಡಿ ಹಿಂದೂ ಧರ್ಮ  ಉದ್ಧರಿಸಬಹುದಲ್ಲವೇ?

ಅದಕ್ಕೆ ಯಾರದೂ ತಕರಾರು ಬರಲಾರದು.  ಸುಮ್ಮನೆ ಪಾಪ, ನಮ್ಮ ಹಿಂದೂ ಮಹಿಳೆಯರ ಉಸಾಬರಿ ಏಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.