ADVERTISEMENT

ಹುತ್ತವ ಬಡಿದೊಡೆ...

ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಮೊನ್ನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜರುಗಿದ ಮಡೆ ಮಡೆ ಸ್ನಾನದ ವಿರುದ್ಧ ಕೆಲವು ಸಾಧು ಸತ್ಪುರು­ಷರು ಉಪವಾಸ ನಿರತ ಪ್ರತಿಭಟನೆ ಮಾಡಿದ್ದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಅದರ ಪರಿಣಾಮ ಮಾತ್ರ ಶೂನ್ಯ!

ಘಟ್ಟದ ಕೆಳಗಿನ ಕುಕ್ಕೆ ಕ್ಷೇತ್ರದಲ್ಲಿ ನಡೆದ ಮಡೆ ಮಡೆ ಸ್ನಾನ ನಿಲ್ಲಿಸಲು ನೂರಾರು ಮೈಲಿ ದೂರದ ಘಟ್ಟದ ಮೇಲಿನ ಬೆಂಗಳೂರಿನಲ್ಲಿ ನಿರಶನ ನಿರತ ಈ ಸಾಧು ಸತ್ಪುರು­ಷರ ದಿವ್ಯ ವಾಣಿ ಮಡೆ ಮಡೆ ಸ್ನಾನದ ಭಕ್ತರಿಗೆ ಮುಟ್ಟಲೇ ಇಲ್ಲ. ಇದು ಹೋರಾಟದ ಕಳಕಳಿಯ ನಿಷ್ಪ್ರಯೋಜಕತೆಗೆ ದಿಕ್ಸೂಚಿಯಾಗಿದೆ.

ಸ್ವಾಮಿ ವಿವೇಕಾನಂದರಂಥ ಪರಿವ್ರಾಜಕರು ನುಡಿದ ಒಂದು ಮಾತು ವಿಶ್ವದಲ್ಲಿ ಅನುರಣಿಸಿ, ಸಾಮಾಜಿಕ ಪರಿವರ್ತನೆಗೆ ಸಂಚಲನವಾಯಿತು. ರಾಮಕೃಷ್ಣ ಪರಮಹಂಸರು, ಅರಬಿಂದೊರಂಥ ಮಹಾತ್ಮರ ವಾಣಿ ಪ್ರಸಾದವಾಣಿಯಾಗಿ ಜನರ ಮೇಲೆ ಗಾಢ ಪರಿಣಾಮ ಬೀರಿದ್ದು ಸರ್ವವೇದ್ಯ.

ಅವರಂತೆಯೇ, ನಮ್ಮ ಈ ಸಾಧು ಸತ್ಪುರುಷರ ವಾಣಿ ಪ್ರಸಾದವಾಣಿಯಾದಾಗ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಈ ನಾಡಿನ ಸಾಧು ಸತ್ಪುರುಷರಿಗೆ ನಿಜವಾದ ಕಳಕಳಿ ಇದ್ದರೆ, ಅವರು ಮಡೆ ಮಡೆ ಸ್ನಾನ ನಡೆಯುವ ಸ್ಥಳದಲ್ಲಿ ನಿರಶನ ಕೈಗೊಂಡು, ಭಕ್ತರ ಮನವೊಲಿಸುವ ಮೂಲಕ ಈ ದುಷ್ಟ ಪದ್ಧತಿಯನ್ನು ತಡೆಯಬಹು­ದಿತ್ತು. ಆದರೆ ಇವರ ಈ ಹೋರಾಟದ ಪರಿ ಹುತ್ತವನು ಬಡಿದ ನಿಷ್ಫಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.