ಹೆಮ್ಮೆಪಡುವಂತಿದೆ
ಭಾರತೀಯರ
ಆಚಾರ-ವಿಚಾರ
ತಲೆತಗ್ಗಿಸುವಂತಿದೆ
ಭಾರತೀಯರ
ಭ್ರಷ್ಟಾಚಾರ!
ಹೌದು...
ಗಂಡಾಗುಂಡಿ ಮಾಡಿ
ಗಡಿಗೆ ತುಪ್ಪ ಕುಡಿಯುವ-
ಕುಡಿಗಳಿಂದ ಭಾರತದಲ್ಲಿ
ನಡೆಯುತ್ತಿವೆ ಎಂಥೆಂಥದೋ
ಪವಾಡಗಳು!
ನೆಲ-ಜಲ, ಕೆರೆ-ಬಾವಿ,
ಮನೆ- ಶೌಚಾಲಯ ನುಂಗುವ
ಹೊಲಸು ಬಾಕರು;
ಅನ್ನಕ್ಕೂ ಕನ್ನ ಹಾಕಿ
ದೇಶದ ಸಂಪತ್ತನ್ನೂ
ಬಿಡದ ಬಕಾಸುರರಿರುವಾಗ
ಭಾರತಕ್ಕೆ ಸಿ(ದ)ಕ್ಕಿದೆ
ಭ್ರಷ್ಟಾಚಾರದಲ್ಲಿ ೯೪ನೇ ಸ್ಥಾನ!
–ಕೆ.ಶರಣಪ್ಪ ನಿಡಶೇಸಿ, ಕುಷ್ಟಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.