ADVERTISEMENT

ಹೊಸ ಯೋಜನೆಗಳು ಬರುವಂತಾಗಲಿ

ಬಾಳಪ್ಪ ತಾಳಕೇರಿ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಉತ್ತರ ಕರ್ನಾಟಕದವರಿಗೆ ತುಸು ನೆಮ್ಮದಿಯನ್ನು ತಂದು ಕೊಟ್ಟ, ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿರುವುದು ಸಿಹಿ ಸುದ್ದಿ.  ಇದು ಉತ್ತರ ಕರ್ನಾಟಕದವರಿಗೆ ಅತಿ ಮುಖ್ಯವಾಗಿದೆ. ಪ್ರಾದೇಶಿಕ ತಾರತಮ್ಯದ ಕೂಗಿನಿಂದ ನರಳುತ್ತಾ ಬಂದಿರುವ ಈ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನತೆ ಬೇಸತ್ತು ಹೋಗಿದ್ದಾರೆ. 

ನಮ್ಮ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.  ಹೊಸ ಸೌಧದಲ್ಲಿ ಹೊಸ ಯೋಜನೆಗಳು ಬರುವಂತಾಗಲಿ ಎಂಬುದೆ ಜನರ ಆಶಯವಾಗಿದೆ, ಉತ್ತರ ಕರ್ನಾಟಕದ ಭಾಗಕ್ಕೆ ಹೆಚ್ಚಿನ ಸವಲತ್ತುಗಳು ಒದಗಿ ಬರಬಹುದೆಂಬ ಮಹದಾಸೆ ಹೊಂದಿದ್ದೇವೆ. ಈ ಭಾಗದಲ್ಲಿ ನೆನೆಗುದ್ದಿಗೆ ಬಿದ್ದಿರುವ ಹಲವಾರು ಸರ್ಕಾರಿ ಯೋಜನೆಗಳಿಗೆ ಜೀವ ತುಂಬುವ ಚರ್ಚೆಯಾಗಲಿ.  ಶಿಕ್ಷಣ ಸಮಸ್ಯೆ, ನರೇಗಾ ಯೋಜನೆಯಲ್ಲಿ  ಶ್ರಮಿಸಿದ ಕುಟುಂಬಕ್ಕೆ ಪರಿಹಾರ, ಪಡಿತರ ಸಮಸ್ಯೆ, ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಕಲಾಪವಾಗಲಿ.  ಜನನಾಯಕರು ಜನರ ನಿರಿಕ್ಷೆಯನ್ನು ಹುಸಿಗೊಳಿಸದಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.