ADVERTISEMENT

ಹೋರಾಟಕ್ಕೆ ಬರೆ!

ಎಲ್.ಎಚ್.ಅರುಣಕುಮಾರ್, ದಾವಣಗೆರೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಕಪ್ಪು ಹಣದ ಬೆನ್ನು ಬಿದ್ದ
ಯೋಗಿಯ ನಿಟಿಕೆ ತೆಗೆಯಲು
`ಕೈ~ ತೊಳೆದು ನಿಂತ ಕಾಂಗ್ರೆಸ್,
ಸಮಾಜದ ರೋಗ ನಿವಾರಕನಿಗೆ
ಅರ್ಥವಾಗುತ್ತಿಲ್ಲ ಸರ್ಕಾರದ
ಸರ್ಕಸ್; ಯೋಗ ಗುರುವಿಗೆ
ಬಂಧನದ ಸುಯೋಗ!
ರಾಮಲೀಲೆಯ ಮೈದಾನದಲ್ಲಿ
ಏನಿದೇನಿದು ಹೊಸ ಪ್ರಯೋಗ?
ಪ್ರಜಾಪ್ರಭುತ್ವದ ರಕ್ಷಣೆಯ
ಹರಿಕಾರನಿಗಿಂದು
ಅಷ್ಟು ಸುಲಭವಿಲ್ಲ,
`ಜನದೇವರ~ ತೇರು ಎಳೆಯುವ
ಸಾಹಸ ಹೋರಾಟದ ಹಾದಿಯ
ಇಕ್ಕೆಲದಲ್ಲೂ ನಿಂತಿದ್ದಾರೆ
ವಿಘ್ನ ಸಂತೋಷಿಗಳು
ಎಳೆಯಲಿದ್ದಾರೆ ನಿಮ್ಮ
ಸುಂದರ ಕನಸುಗಳ ಮೇಲೆ
ಸಲಾಕೆಗಳ ಬರೆಯನು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.