ADVERTISEMENT

ಬ್ರಾಹ್ಮಣ ಧರ್ಮವಾಗಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST

ಲಿಂಗಾಯತರಿಗಿಂತ ಮೊದಲು ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವುದು ಸೂಕ್ತ. ಬ್ರಾಹ್ಮಣರು ವೈದಿಕ ಧರ್ಮಾನುಯಾಯಿಗಳಾಗಿದ್ದು, ಅವರು ಹಿಂದೂಗಳಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವೈದಿಕರು, ಜೈನರು ಹಾಗೂ ಬೌದ್ಧರು ಇದ್ದರು. ಜನಸಾಮಾನ್ಯರು ಬ್ರಾಹ್ಮಣರನ್ನು ಅನುಕರಿಸಿ ನಡೆಯುತ್ತಿದ್ದರು. ಅವರಿಗೆ ಯಾವುದೇ ನಿರ್ದಿಷ್ಟ ಧರ್ಮವಿರಲಿಲ್ಲ. ಚಂದ್ರಗುಪ್ತ ಮೌರ್ಯ ವೈದಿಕ ಧರ್ಮ ಬಿಟ್ಟು ಜೈನಧರ್ಮ ಸ್ವೀಕರಿಸಿದ, ಅವನ ಮಗ ಬಿಂದುಸಾರ ವೈದಿಕ ಧರ್ಮವನ್ನು ಪಾಲಿಸಿದ. ಬಿಂದುಸಾರನ ಮಗ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ. ರಾಜನ ಧರ್ಮವನ್ನೇ ಜನಸಾಮಾನ್ಯರು ಅನುಸರಿಸುತ್ತಿದ್ದರು.

ಹಿಂದೆ ಜೈನರ ಆಳ್ವಿಕೆ ಇದ್ದಾಗ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಜೈನರಿದ್ದರು. ಹಿಂದೂ ಎನ್ನುವ ಧರ್ಮವೇ ಇರದಿದ್ದರೂ ಮುಸಲ್ಮಾನರ ಕಾಲದಲ್ಲಿ ಇಲ್ಲಿಯ ಜನರನ್ನು ಹಿಂದೂಗಳೆಂದು ಕರೆಯಲಾಯಿತು. ಬ್ರಿಟಿಷರ ಕಾಲದಲ್ಲಿ ಬೌದ್ಧ, ಜೈನ ಹಾಗೂ ಸಿಖ್ಖರನ್ನು ಪ್ರತ್ಯೇಕಿಸಿ ಉಳಿದವರನ್ನು ಹಿಂದೂಗಳೆಂದು ಕರೆಯಲಾಯಿತು.

ವಾಸ್ತವವಾಗಿ ವೇದಗಳನ್ನು ಅನುಸರಿಸುವ ಬ್ರಾಹ್ಮಣರು ಮಾತ್ರ ವೈದಿಕರಾಗಿದ್ದು, ಇತರರು ವೈದಿಕರಲ್ಲ. ಆದ್ದರಿಂದ ವೈದಿಕರಿಗೆ ಪ್ರತ್ಯೇಕ ಧರ್ಮದ ಸ್ಥಾನವನ್ನು ನೀಡಬೇಕು. ಬ್ರಾಹ್ಮಣ ದ್ವೇಷದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಹಿಂದೂಗಳ ನೇತೃತ್ವ ವಹಿಸಿಕೊಳ್ಳಲಿ, ಹಿಂದೂಗಳ ಉದ್ಧಾರ ಮಾಡುವ ಉಸಾಬರಿ ಬ್ರಾಹ್ಮಣರಿಗೆ ಬೇಡ.

ADVERTISEMENT

–ಡಾ.ದೇವಿದಾಸ ಪ್ರಭು, ಭಟ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.