ADVERTISEMENT

ಇದನ್ನೂ ಪರಿಗಣಿಸಿ...

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ನಾಡಗೀತೆಯ ರಾಗ ಸಂಯೋಜನೆ ಕುರಿತ ಗೊಂದಲಗಳು ಇನ್ನೂ ಮುಗಿದಿಲ್ಲ ಎಂದು ವರದಿಯಾಗಿದೆ (ಪ್ರ.ವಾ., ಜ.5). ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್‌ ಅವರಲ್ಲಿ ಯಾರ ಸಂಯೋಜನೆ ಅಧಿಕೃತ ಮಾಡಬೇಕು ಎಂದು ನಿರ್ಧರಿಸಲು ಸರ್ಕಾರ ರಚಿಸಿದ ಸಮಿತಿಯ ಶಿಫಾರಸು ಕೂಡ ಒಮ್ಮತದಿಂದ ಕೂಡಿಲ್ಲ.

ಈಚೆಗೆ ಯೂಟ್ಯೂಬ್‌ನಲ್ಲಿ ಕುವೆಂಪು ಅವರ ಗೀತೆಗಳ ವಿಡಿಯೊ ನೋಡುತ್ತಿದ್ದೆ. ಅದರಲ್ಲಿ ಕನ್ನಡ ಸಿನಿಮಾವೊಂದರಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿರುವ ಇದೇ ಗೀತೆಯ ದೃಶ್ಯಾವಳಿ ಕಂಡು ನನಗೆ ಹೆಮ್ಮೆಯಾಯಿತು. ಸೊಗಸಾದ ಸಂಗೀತ, ಮಧುರವಾದ ಗಾಯನ. ಕುತೂಹಲಕ್ಕೆ ಅದರ ಅವಧಿನೋಡಿದೆ. ಮೂರೂವರೆ ನಿಮಿಷ ಇತ್ತು. ಚರಣಗಳ ಮಧ್ಯದ ವಾದ್ಯಸಂಗೀತ ತೆಗೆದರೆ ಎರಡು ನಿಮಿಷಗಳಿಗಿಂತ ಕಡಿಮೆಯಾಗುತ್ತದೆ. ಸಂಗೀತ ಬಾರದವರೂ ಹಾಡಬಹುದಾದಷ್ಟು ಸರಳವಾಗಿದೆ. ಇದನ್ನೇನಾವು ಅಧಿಕೃತ ಮಾಡಿಕೊಳ್ಳಬಹುದೇ? ಸಂಬಂಧಪಟ್ಟವರು
ಯೋಚಿಸಿ ಶೀಘ್ರ ಒಂದು ತೀರ್ಮಾನಕ್ಕೆ ಬಂದರೆ ಅನುಕೂಲ.

–ಸುಗ್ಗನಹಳ್ಳಿ ಷಡಕ್ಷರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.