ADVERTISEMENT

ಮೌಢ್ಯ ಮತ್ತು ಮರಳು

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

‘ಸೇತುವೆ ನಿರ್ಮಾಣಕ್ಕೂ ಮರಳಿನ ಕೊರತೆ’ ಎಂದು ವರದಿಯಾಗಿದೆ (ಪ್ರ.ವಾ., ಜ. 3). ಮರಳಿನ ಕೊರತೆಯ ಹಿಂದೆ ಮೂಢ ನಂಬಿಕೆಯ ಪಾತ್ರವನ್ನು ನಾವು ಗಮನಿಸಲೇಬೇಕಿದೆ. ಹೊಸದಾಗಿ ಕಟ್ಟಿಸಿದ ಮನೆಗಳಲ್ಲಿ ವಾಸ್ತುದೋಷ ಹುಡುಕುವ ವಾಸ್ತು ದಂಧೆಕೋರರು, ಮನೆ ಕಟ್ಟಿಸಿದವರ ನೆಮ್ಮದಿಯನ್ನೇ ಕೆಡಿಸುತ್ತಾರೆ. ಹೊಸದಾಗಿ ಕಟ್ಟಿಸಿದ ಮನೆಗಳನ್ನೇ ಕಿತ್ತು ಹಾಕಿ ಮತ್ತೆ ವಾಸ್ತು ಪ್ರಕಾರ ಕಟ್ಟಡ ಕಟ್ಟಿಸುವಲ್ಲಿ ಅನೇಕರು ಈಗ ತೊಡಗಿದ್ದಾರೆ. ಇದು ಒಬ್ಬಿಬ್ಬರ ಸಂಗತಿಯಲ್ಲ. ಅನೇಕ ಹಳ್ಳಿಗಳಲ್ಲಿ ಈ ಕೆಡವುವ–ಕಟ್ಟುವ ಕಾರ್ಯವನ್ನು ನಾವಿಂದು ಕಾಣುತ್ತಿದ್ದೇವೆ.

ಇದೆಲ್ಲ ಉಳ್ಳವರಿಂದಲೇ ಆಗುತ್ತಿದೆ. ಅದರಿಂದಾಗಿ ಮರಳಿನ ಬೇಡಿಕೆ ಹೆಚ್ಚಾಗಿದೆ. ಮರಳು ಗಣಿಗಾರಿಕೆಗೆ ಇರುವ ನಿಯಮಗಳ ಅಡ್ಡಿ ನಿವಾರಿಸಿಕೊಂಡು ಮರಳು ಮಾರುಕಟ್ಟೆಗೆ ಬರುವಷ್ಟರಲ್ಲಿ ಅದರ ಬೆಲೆ ದುಪ್ಪಟ್ಟಾಗುತ್ತಿದೆ. ಬಡವರಿಗಂತೂ ಮನೆ ನಿರ್ಮಿಸಿಕೊಳ್ಳುವುದು ಗಗನಕುಸುಮವೇ ಆಗಿದೆ. ಇದರೊಟ್ಟಿಗೆ ನಾವು ನಿಸರ್ಗ ಸಂಪತ್ತಾದ ಮರಳಿನ ಬೇಕಾಬಿಟ್ಟಿ ಬಳಕೆಯಾಗುತ್ತಿರುವುದನ್ನು ಕೂಡ ಅರಿತುಕೊಳ್ಳಬೇಕು.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.