ADVERTISEMENT

ಕನ್ನಡಿಗರೇ ಹೆಚ್ಚಿದ್ದರು!

ಡಿ.ಎಲ್.ಮಂಜು
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಡಿ. ಎಸ್. ನಾಗಭೂಷಣ ಅವರು ಬರೆದ ‘ಸೆಕ್ಯುಲರ್‌ ಅಸಮತೋಲನ’ (ವಾ.ವಾ., ಜ.31) ಪತ್ರಕ್ಕೆ ವಿವರಣೆ.

‘ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಸ್ಮರಣೆಯ ಸಮಾರಂಭದಲ್ಲಿ ಅತಿಥಿ- ಗಣ್ಯರ ಸಮೂಹದಲ್ಲಿ ಎಚ್. ಎಸ್. ದೊರೆಸ್ವಾಮಿ ಮತ್ತು ಪ್ರಕಾಶ್ ರೈ ಎಂಬ ಇಬ್ಬರಾದರೂ ಸ್ಥಳೀಯರಿದ್ದುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ’ ಎಂದು ಇನ್ನುಳಿದ ಕನ್ನಡಿಗರನ್ನು ಅವರು ನಿರ್ಲಕ್ಷಿಸಿದ್ದು ಸರಿಯಲ್ಲ.

ಗೌರಿ ಅವರನ್ನು ಕುರಿತ ಎರಡು ಪುಸ್ತಕಗಳ ಬಿಡುಗಡೆಯ ಸಭೆಯಲ್ಲಿ ಕವಿತಾ ಲಂಕೇಶ್, ಕೆ. ನೀಲಾ, ಎಸ್.ಸಿ.ಭುವನೇಶ್ವರಿ, ದೊರೆಸ್ವಾಮಿ, ಪ್ರಕಾಶ್ ರೈ, ದಿನೇಶ್ ಅಮಿನ್‌ಮಟ್ಟು, ಡಾ. ಎಂ.ಬಿ. ರಾಮಮೂರ್ತಿ, ಡಾ. ಎ.ಎಸ್. ಪ್ರಭಾಕರ್, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮುಂತಾದವರು ವೇದಿಕೆಯಲ್ಲಿದ್ದರು. ಎರಡನೆಯ ಗೋಷ್ಠಿಯಲ್ಲಿ ಸ್ಥಳೀಯರಾದ ಡಾ. ಎಚ್.ವಿ. ವಾಸು, ವಿಕಾಸ್ ಮೌರ್ಯ, ಕುಮಾರ ಬುರಡಿಕಟ್ಟಿ ಇವರ ಜೊತೆಗೆ ಹೊರಗಿನವರಾದ ತೀಸ್ತಾ ಸೆಟಲ್ವಾಡ್‌, ಜಿಗ್ನೇಶ್‌, ಕನ್ಹಯ್ಯ ಹೀಗೆ ಇನ್ನೂ ಹಲವರು ಇದ್ದರು.

ADVERTISEMENT

ಜೊತೆಗೆ ಗೌರಿ ಕೊಲೆಯ ತನಿಖೆ ಎಲ್ಲಿಗೆ ಬಂದಿದೆ ಎಂಬುದರ ಬಗ್ಗೆ ಔಪಚಾರಿಕತೆಗಾದರೂ ಕೇಳಲಿಲ್ಲ ಎಂದಿದ್ದಾರೆ. ಇದರ ಬಗ್ಗೆ ಗೌರಿ ಅವರ ಸಹೋದರಿ ಕವಿತಾ ಲಂಕೇಶ್, ‘ಪ್ರಕರಣದ ತನಿಖೆ ಕೊನೆಯ ಹಂತದಲ್ಲಿದ್ದು ಸಿಬಿಐಗೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ. ತನಿಖೆಯ ಪ್ರಗತಿ ಬಗ್ಗೆ, ನನಗೆ ಹಾಗೂ ಅಮ್ಮನಿಗೆ ಎಸ್ಐಟಿ ಪ್ರತಿ ವಾರ ವರದಿ ನೀಡುತ್ತಿದೆ. ಎಸ್ಐಟಿ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ’ ಎಂದಿರುವುದು ವರದಿಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.