ADVERTISEMENT

ಮಾಹಿತಿ ಅಪೂರ್ಣ

ಗಿರೀಶ ವಿ.ವಾಘ್
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

‘ಶೇ 35 ರಷ್ಟು ಫಿಟ್‌ಮೆಂಟ್ ಶಿಫಾರಸು’ (ಪ್ರ.ವಾ., ಜ. 26) ಎಂಬ ವರದಿಯಲ್ಲಿ, ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವ ಆರನೇ ವೇತನ ಆಯೋಗದ ವರದಿಯಲ್ಲಿನ ಮುಖ್ಯ ಮಾಹಿತಿಯೊಂದನ್ನು ಕೋಷ್ಟಕದೊಂದಿಗೆ ಕೊಡಲಾಗಿದೆ. ಈ ಕೋಷ್ಟಕದಲ್ಲಿ ನಮ್ಮ ರಾಜ್ಯದ ಸರ್ಕಾರಿ ನೌಕರರು ಪಡೆಯುತ್ತಿರುವ ಕನಿಷ್ಠ ಮೂಲ ವೇತನ ಮತ್ತು ನಮ್ಮ ಸರ್ಕಾರ ಬಜೆಟ್‌ನಲ್ಲಿ ವೇತನಗಳಿಗಾಗಿ ಮೀಸಲಾಗಿಟ್ಟಿರುವ ಹಣದ ಶೇಕಡಾವಾರು ಪ್ರಮಾಣವನ್ನು ನಮ್ಮ ನೆರೆಯ ನಾಲ್ಕು ರಾಜ್ಯಗಳೊಂದಿಗೆ ಅಂಕಿ ಸಂಖ್ಯೆಗಳೊಂದಿಗೆ ಹೋಲಿಸಲಾಗಿದೆ. ಈ ಹೋಲಿಕೆಯಿಂದ ತಿಳಿದು ಬರುವ ಸಂಗತಿ ಎಂದರೆ ನಮ್ಮಲ್ಲಿ ಈ ಸಿಬ್ಬಂದಿಯ ಮೂಲ ವೇತನ ಮತ್ತು ಅವರ ವೇತನಕ್ಕಾಗಿ ಆಗುತ್ತಿರುವ ವೆಚ್ಚಗಳೆರಡೂ ಕನಿಷ್ಠ ಪ್ರಮಾಣದಲ್ಲಿವೆ.

ಈ ಹೋಲಿಕೆ ಅರ್ಥಪೂರ್ಣವಾಗಬೇಕಾದರೆ ಇನ್ನೊಂದು ಮಾಹಿತಿಯ ಅಗತ್ಯವಿದೆ. ಅದೆಂದರೆ; ಈ ಐದೂ ರಾಜ್ಯಗಳ ಜನಸಂಖ್ಯೆ ಮತ್ತು ಅಲ್ಲಿನ ಸರ್ಕಾರಿ ನೌಕರರ ಸಂಖ್ಯೆಯ ನಡುವಿನ ಅನುಪಾತ. ನಮ್ಮ ರಾಜ್ಯದ ಜನಸಂಖ್ಯೆ ಆರೂವರೆ ಕೋಟಿಯಷ್ಟಿದ್ದು, ಸರ್ಕಾರಿ ನೌಕರರ ಸಂಖ್ಯೆ ಐದೂವರೆ ಲಕ್ಷದಷ್ಟಿದೆ. ಅಂದರೆ ನಮ್ಮಲ್ಲಿ ಸಾವಿರ ಜನರಿಗೆ ಒಂಬತ್ತು ಜನ ಸರ್ಕಾರಿ ಸಿಬ್ಬಂದಿ ಇದ್ದಾರೆ. ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರ ಸಂಖ್ಯೆಯನ್ನು ಗಮನಿಸಿದಾಗ ನಮ್ಮಲ್ಲಿ ಸಾವಿರ ಜನರಿಗೆ ಹನ್ನೊಂದು ಜನ ಸರ್ಕಾರಿ ನೌಕರರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದೇ ನಮ್ಮ ಪ್ರಗತಿಪರರು ಖಾಸಗಿ ಬಂಡವಾಳಶಾಹಿಯ ಆಡುಂಬೊಲ ಎಂದು ಜರೆಯುವ ಅಮೆರಿಕದಲ್ಲಿ ಸಾವಿರ ಜನರಿಗೆ ಮೂವತ್ನಾಲ್ಕು ಜನ ಸರ್ಕಾರಿ ನೌಕರರಿದ್ದಾರೆ.

ಹಾಗೆಯೇ ಇಲ್ಲಿ ಅಗತ್ಯವಾಗಿದ್ದ ಇನ್ನೊಂದು ಮಾಹಿತಿ ಎಂದರೆ, ನಮ್ಮ ಸರ್ಕಾರ ನಿವೃತ್ತ ನೌಕರರ ಪಿಂಚಣಿಗಾಗಿ ವಾರ್ಷಿಕ ಎಷ್ಟು ಖರ್ಚು ಮಾಡುತ್ತಿದೆ ಎಂಬುದು. ನಮ್ಮಲ್ಲಿ ಐದೂವರೆ ಲಕ್ಷ ನಿವೃತ್ತ ಸರ್ಕಾರಿ ನೌಕರರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.