ADVERTISEMENT

ಪ್ರಧಾನಿ ಮೌನ ಸರಿಯಲ್ಲ

ದಿನೇಶ್‌ ಕೆ.ಕಾರ್ಯಪ್ಪ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರುವರಿ 4 ರಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹದಾಯಿ ವಿಚಾರವಾಗಿ ಚಕಾರವೆತ್ತಲಿಲ್ಲ. ಅಂದು ಅವರು ತಮ್ಮ ಪಕ್ಷದ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರಿಂದ ಈ ವಿಷಯ ಪ್ರಸ್ತಾಪಿಸಲಿಲ್ಲ ಎಂದುಕೊಳ್ಳಬಹುದು.

ಆದರೆ, ಫೆಬ್ರುವರಿ 6ರಂದು, ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಜ್ಯದ ಸಂಸದರು ಲೋಕಸಭೆಯಲ್ಲಿ ಜಟಾಪಟಿ ನಡೆಸಿದಾಗಲೂ ಪ್ರಧಾನಿ ಮೌನ ವಹಿಸಿದ್ದು ಸರಿಯಲ್ಲ.

ಪ್ರಧಾನಿಯ ಸಮ್ಮುಖದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಈ ವಿಷಯದ ಬಗ್ಗೆ ಆರೋಪ, ಪ್ರತ್ಯಾರೋಪ ನಡೆಸಿದಾಗ, ಅವರು ಮಧ್ಯಪ್ರವೇಶಿಸಿ ಮಹದಾಯಿ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬಹುದಿತ್ತು. ದೇಶದ ಒಕ್ಕೂಟ ವ್ಯವಸ್ಥೆಯ ಸಂರಕ್ಷಕರಾದ ಪ್ರಧಾನಿ, ಈಗಲಾದರೂ ಜವಾಬ್ದಾರಿಯ ನಡೆ ಪ್ರದರ್ಶಿಸಿ, ಕುಡಿಯುವ ನೀರಿನ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಮುಂದಾಗಬಾರದೇಕೆ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.