ರಾಜ್ಯ ವಿಧಾನಸಭಾ ಚುನಾವಣೆ ಬಾಗಿಲಿಗೆ ಬಂದಿದೆ. ತಮ್ಮ ಕ್ಷೇತ್ರವನ್ನು ತಮ್ಮನಿಗೆ, ಅಣ್ಣನಿಗೆ, ಹೆಂಡತಿಗೆ, ಮಗನಿಗೆ... ಹೀಗೆ ಸಂಬಂಧಿಗಳಿಗೆ ಬಿಟ್ಟುಕೊಡುವುದಾಗಿ ಕೆಲವು ರಾಜಕೀಯ ಧುರೀಣರು ಘೋಷಣೆ ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಳ್ಳಬೇಕು. ಕ್ಷೇತ್ರವನ್ನು ಬಿಟ್ಟುಕೊಡುವುದು, ಬಿಟ್ಟುಕೊಡದೇ ಇರುವುದು ತಮ್ಮ ಕೈಯಲ್ಲಿದೆ ಎನ್ನುವ ಪಾಠವನ್ನು ಈ ಧುರೀಣರಿಗೆ ಕಲಿಸಬೇಕು.
- ಕಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.