ADVERTISEMENT

ಅಭಿವೃದ್ಧಿಗೆ ಬಳಸಿ

ಶಾಂತಿನಾಥ ಕೆ.ಹೋತಪೇಟಿ  ಹುಬ್ಬಳ್ಳಿ
Published 8 ಅಕ್ಟೋಬರ್ 2018, 20:15 IST
Last Updated 8 ಅಕ್ಟೋಬರ್ 2018, 20:15 IST

ಎಸಿಬಿ ಅಧಿಕಾರಿಗಳು ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ, ಕೋಟಿ ಕೋಟಿ ಸಂಪತ್ತನ್ನುಪತ್ತೆ ಹಚ್ಚಿದ್ದಾರೆ. ಈ ಸಂಪತ್ತು ಸಾರ್ವಜನಿಕರದ್ದಾಗಿದೆ. ಸರ್ಕಾರ ಅದನ್ನು ಸಾರ್ವಜನಿಕ ಕಾರ್ಯಗಳಾದ ರಸ್ತೆ ನಿರ್ಮಾಣ, ನೀರು ಪೂರೈಕೆ ಯೋಜನೆಗಳಿಗೆ ಬಳಸಲಿ.

ನಮ್ಮ ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳಿಲ್ಲದೆ ಜನರು ಪರಿತಪಿಸುತ್ತಿರುವ ವಿಚಾರ ಸರ್ಕಾರಕ್ಕೆ ತಿಳಿದದ್ದೇ. ಇನ್ನಷ್ಟು ಭ್ರಷ್ಟರ ಬೆನ್ನುಹತ್ತಿ ಅವರ ಸಂಪತ್ತನ್ನು ಅಗೆಯುತ್ತಾ ಹೋದರೆ ಸಾರ್ವಜನಿಕ ಕಾರ್ಯಗಳಿಗೆ ಹಣದ ಕೊರತೆ ಆಗಲಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT