ADVERTISEMENT

ವಾಚಕರ ವಾಣಿ: ಕಲಿತದ್ದು ದೇಶದ್ರೋಹಿ ಕೃತ್ಯ ಎಸಗಲೆಂದೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಫೆಬ್ರುವರಿ 2022, 19:31 IST
Last Updated 25 ಫೆಬ್ರುವರಿ 2022, 19:31 IST

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳ ಶೈಕ್ಷಣಿಕ ವಿವರ ನೋಡಿದರೆ ಆಶ್ಚರ್ಯ ಹಾಗೂ ದಿಗ್ಭ್ರಮೆಯಾಗುತ್ತದೆ. ಈ ಬಗ್ಗೆ ಯಾರೋ ಮಾಹಿತಿ ನೀಡಿದ್ದಲ್ಲ, ಸ್ವತಃ ನ್ಯಾಯಾಲಯವೇ ಅವರ ಹಿನ್ನೆಲೆಯನ್ನು ತಿಳಿಸಿದೆ. ಈ ದೇಶದ್ರೋಹಿ ಅಪರಾಧಿಗಳಲ್ಲಿ ಕೆಲವರು ವೈದ್ಯರು, ಎಂಜಿನಿಯರ್, ಪ್ರೊಫೆಸರ್‌ಗಳಾಗಿದ್ದಾರೆ. ಈ ಅಪರಾಧಿಗಳು ಹೀಗೆ ಉನ್ನತ ಶಿಕ್ಷಣ ಪಡೆದಿದ್ದ ಹಾಗೂ ಉನ್ನತ ಕೌಶಲ ಹೊಂದಿದ್ದು ಇಂತಹ ದೇಶದ್ರೋಹಿ ಕೃತ್ಯ ಎಸಗಲೆಂದೇ?

ಶಿಕ್ಷಣದಿಂದ ಸಮಾಜ, ದೇಶ ಸುಧಾರಿಸಬೇಕಿತ್ತು. ಅದರ ಬದಲು ಸಮಾಜವನ್ನು, ದೇಶವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿರುವ ಇಂತಹವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಸರಿಯಾದ ಕೆಲಸ ಮಾಡಿದೆ. ಇಂತಹ ದ್ರೋಹಿಗಳನ್ನು ವಿದ್ಯಾವಂತರೆಂದು ಕರೆಯುವುದಕ್ಕಿಂತ ಬರೀ ಸಾಕ್ಷರ ಅವಿದ್ಯಾವಂತರೆಂದು ಕರೆಯಬೇಕು.

-ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.