ADVERTISEMENT

ಪ್ಲಾಸ್ಟಿಕ್‌ ಆಕಾಶಬುಟ್ಟಿಗೆ ವಿನಾಯಿತಿ ಬೇಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 20:21 IST
Last Updated 28 ಅಕ್ಟೋಬರ್ 2019, 20:21 IST

ದೀಪಾವಳಿ ವೇಳೆ ಅಂಗಡಿಗಳಲ್ಲಿ ಸಿಗುವ ಆಕಾಶಬುಟ್ಟಿಗಳಲ್ಲಿ ಬಹುಪಾಲು ಪ್ಲಾಸ್ಟಿಕ್‌ನಿಂದ ತಯಾರಿಸಿದ ವಾಗಿರುತ್ತವೆ. ನಾವು ಚಿಕ್ಕವರಿದ್ದಾಗ ಬಿದಿರು ಕಡ್ಡಿ, ಬಣ್ಣದ ಕಾಗದ, ಅಂಟು ಬಳಸಿ ಪರಿಸರಸ್ನೇಹಿ ಆಕಾಶಬುಟ್ಟಿಗಳನ್ನು ತಯಾರಿಸಿ ಬಳಸುತ್ತಿದ್ದೆವು. ಪ್ಲಾಸ್ಟಿಕ್ ಆಕಾಶಬುಟ್ಟಿಯನ್ನು ಕೊಂಡರೆ ಕೆಲ ವರ್ಷಗಳ ಕಾಲ ಅದನ್ನು ಬಳಸಬಹುದು ಎಂದು ಜನಸಾಮಾನ್ಯರೂ ಹೆಚ್ಚಾಗಿ ಅದನ್ನೇ ಕೊಂಡು ಕೊಳ್ಳುತ್ತಾರೆ. ಆದರೆ ಅದರಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.ಸರ್ಕಾರ ಈಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿ ರುವಂತೆ ಪ್ಲಾಸ್ಟಿಕ್ ಆಕಾಶಬುಟ್ಟಿಗಳನ್ನೂ ನಿಷೇಧಿಸಬೇಕು.
ಪರಿಸರ ಸ್ನೇಹಿ ಆಕಾಶಬುಟ್ಟಿಗಳನ್ನು ನಿರ್ಮಿಸುವಂತಾಗಲಿ.

-ವೆಂಕಟೇಶ್ ಬೈಲೂರು,ಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT