ADVERTISEMENT

ಕಮಲ ಅರಳಬಹುದೇ? ತುಳಸಿ ಚಿಗುರಬಹುದೇ?

ರಮಾನಂದ ಶರ್ಮಾ, ಬೆಂಗಳೂರು
Published 15 ಜನವರಿ 2019, 19:45 IST
Last Updated 15 ಜನವರಿ 2019, 19:45 IST

ಅಮೆರಿಕದಲ್ಲಿ 2020ಕ್ಕೆ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಮತ್ತು ತುಳಸಿ ಗಬ್ಬಾರ್ಡ್ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಅಮೆರಿಕದಲ್ಲಿ ಮುಂದಿನ ಬಾರಿ ಕಮಲ ಅರಳಬಹುದೇ, ತುಳಸಿ ಚಿಗುರಬಹುದೇ ಎಂದುರಾಜಕೀಯ ವೀಕ್ಷಕರು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.

ಇದು ಸಾಧ್ಯವಾದರೆ ಭಾರತೀಯ ಮೂಲದವರೊಬ್ಬರು, ಅದರಲ್ಲೂ ಮಹಿಳೆಯೊಬ್ಬರು ಅಧ್ಯಕ್ಷ ಪದವಿಗೆ ಏರಿದಂತಾಗುತ್ತದೆ. ಸುಮಾರು 40 ಲಕ್ಷ ಭಾರತೀಯರು ಇರುವ ಅಮೆರಿಕದಲ್ಲಿ ಭಾರತೀಯ ಸಂಜಾತರನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆಯೇ ಅಮೆರಿಕದಲ್ಲಿ ‘ವಿದೇಶಿ ಮಹಿಳೆ’ ಎಂಬುದು ಪರಿಗಣನೆಗೆ ಬರುವುದಿಲ್ಲ. ಅಲ್ಲಿ ವಿದೇಶಿ ಸಂಜಾತರು ಅಧ್ಯಕ್ಷರಾಗುವುದು ವಿಶೇಷವಲ್ಲ. ಬರಾಕ್ ಒಬಾಮ ಕೂಡ ಮೂಲ ಅಮೆರಿಕನ್ನರಲ್ಲ.

ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.